09 Dec 2024
ಹುಲಿಗಳ ಸಾವಿನಲ್ಲಿ ಶೇ. 37 ಇಳಿಕೆ
Pic: Getty, PTI
Vijayasarathy SN
Pic: Getty, PTI
ಭಾರತದಲ್ಲಿ ಹುಲಿಗಳ ಸಾವು ಗಣನೀಯವಾಗಿ ಕಡಿಮೆ ಆಗುತ್ತಿದೆ. 2023ರಲ್ಲಿ 182 ಹುಲಿಗಳು ಸತ್ತಿದ್ದವು. 2024ರಲ್ಲಿ 115 ಹುಲಿಗಳ ಸಾವಾಗಿದೆ.
Pic: Getty, PTI
ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಹಿತಿ ಪ್ರಕಾರ ಹುಲಿಗಳನ್ನು ಬೇಟೆಯಾಡಿ ಕೊಂದಿರುವ ಪ್ರಕರಣಗಳ ಸಂಖ್ಯೆ ಈ ವರ್ಷ 17ರಿಂದ 4ಕ್ಕೆ ಇಳಿದಿದೆ.
Pic: Getty, PTI
2024ರಲ್ಲಿ ಸಾವನ್ನಪ್ಪಿರುವ 115 ಹುಲಿಗಳ ಪೈಕಿ ಕರ್ನಾಟಕದಿಂದ 11 ಒಳಗೊಂಡಿವೆ. ಕಳೆದ ವರ್ಷಕ್ಕಿಂತ ಸಾವಿನ ಸಂಖ್ಯೆ ಒಂದು ಕಡಿಮೆ ಇದೆ.
Pic: Getty, PTI
ಮಧ್ಯಪ್ರದೇಶದಲ್ಲಿ 46 ಹುಲಿಗಳು ಸತ್ತಿವೆ. ಕಳೆದ ವರ್ಷಕ್ಕಿಂತ 3 ಹುಲಿಗಳು ಹೆಚ್ಚು ಸತ್ತಿವೆ. ಮಹಾರಾಷ್ಟ್ರದಲ್ಲಿ 23 ಹುಲಿಗಳು ಕೊನೆಯುಸಿರೆಳೆದಿವೆ.
Pic: Getty, PTI
ಬೇಟೆಗಾರರ ಕೈಗೆ ಸಿಕ್ಕು ಹುಲಿಗಳು ಸಾವನ್ನಪ್ಪುವ ಘಟನೆಗಳು ಬಹಳ ಕಡಿಮೆ ಆಗಿದೆ. ಹುಲಿ ಸಂರಕ್ಷಣಾ ಕ್ರಮಗಳು ಸಮರ್ಪಕವಾಗಿರುವುದು ಇದಕ್ಕೆ ಕಾರಣ.
Pic: Getty, PTI
ಅಪಘಾತ, ಸರಹದ್ದು ಸಂಘರ್ಷ, ವಿಷಪ್ರಾಶನ, ವಿದ್ಯುತ್ ಆಘಾತ ಇತ್ಯಾದಿ ಕಾರಣಕ್ಕೆ ಎಷ್ಟು ಹುಲಿ ಸತ್ತಿವೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ.
Pic: Getty, PTI
ಹೆಚ್ಚಿನ ಹುಲಿಗಳ ಸಾವು ನೈಸರ್ಗಿಕ ಕಾರಣಗಳಿಂದ ಸಂಭವಿಸಿರುವಂಥದ್ದು. ವಾಸಯೋಗ್ಯ ವಾತಾವರಣದ ರಕ್ಷಣೆಯ ಅಗತ್ಯವಿದೆ ಎನ್ನುತ್ತಾರೆ ತಜ್ಞರು.
Next: ಭಾರತದ ಅತ್ಯಂದ ದುಬಾರಿ ಷೇರುಗಳಿವು....
ಇನ್ನಷ್ಟು ನೋಡಿ