By: Vijayasarathy SN
ಬೆಳ್ಳುಳ್ಳಿ ದುಬಾರಿ ಆಗುವ ಭೀತಿ; ಎಲ್ಲೆಲ್ಲಿ ಎಷ್ಟೆಷ್ಟು ಬೆಳೆಯಲಾಗುತ್ತೆ?
13 Dec 2023
13 Dec 2023
ಭಾರತದಲ್ಲಿ ಟೊಮೆಟೋ, ಈರುಳ್ಳಿ ಬಳಿಕ ಈಗ ಬೆಳ್ಳುಳ್ಳಿ ಬೆಲೆ ಹೆಚ್ಚಳದ ಸರದಿ ಬಂದಿದೆ. ಕೆಲವೆಡೆ ಕಿಲೋಗೆ 400 ರೂವರೆಗೂ ಬೆಲೆ ಹೋಗಿದೆ.
ಬೆಳ್ಳುಳ್ಳಿ ದುಬಾರಿ
(Pic credit: Google)
ಭಾರತದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡೂ ಕಾರಣದಿಂದ ಬೆಳ್ಳುಳ್ಳಿ ಬೆಳೆ ಇಳುವರಿ ಕಡಿಮೆ ಆಗಿದೆ. ಆವಕ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಈ ಕಾರಣಕ್ಕೆ ಬೆಲೆ ಹೆಚ್ಚುತ್ತಿದೆ.
ಆವಕ ಕಡಿಮೆ
(Pic credit: Google)
ಭಾರತದಲ್ಲಿ ವರ್ಷಕ್ಕೆ 30 ಲಕ್ಷ ಮೆಟ್ರಿಕ್ ಟನ್ಗಳಷ್ಟು ಬೆಳ್ಳುಳ್ಳಿ ಉತ್ಪಾದನೆ ಆಗುತ್ತದೆ. ಇದರಲ್ಲಿ ಮಧ್ಯಪ್ರದೇಶದ ಪಾಲು ಶೇ. 62ಕ್ಕಿಂತಲೂ ಹೆಚ್ಚು.
ಮ.ಪ್ರ.ದಲ್ಲಿ ಹೆಚ್ಚು
(Pic credit: Google)
ಮ.ಪ್ರ. ಬಳಿಕ ರಾಜಸ್ಥಾನ, ಉತ್ತರಪ್ರದೇಶ, ಗುಜರಾತ್, ಪಂಜಾಬ್, ಅಸ್ಸಾಂ, ಒಡಿಶಾ, ಹರ್ಯಾಣ, ಬಂಗಾಳ ಮತ್ತು ಮಹಾರಾಷ್ಟ್ರ ಟಾಪ್-10ನಲ್ಲಿ ಇವೆ.
ಟಾಪ್-10 ರಾಜ್ಯಗಳು
(Pic credit: Google)
10ನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 22 ಮೆಟ್ರಿಕ್ ಟನ್ ಬೆಳ್ಳುಳ್ಳಿ ಬೆಳೆದರೆ, ಕರ್ನಾಟಕದಲ್ಲಿ ಸುಮಾರು 20 ಮೆಟ್ರಿಕ್ ಟನ್ಗಳಷ್ಟು ಬೆಳೆಯಲಾಗುತ್ತದೆ.
ಕರ್ನಾಟಕದಲ್ಲಿ ಎಷ್ಟು?
(Pic credit: Google)
ಇಡೀ ವಿಶ್ವದಲ್ಲಿ ಸುಮಾರು 28,000 ಮೆಟ್ರಿಕ್ ಟನ್ಗಳಷ್ಟು ಬೆಳ್ಳುಳ್ಳಿ ಬೆಳೆಯಲಾಗುತ್ತದೆ. 101 ದೇಶಗಳು ಬೆಳ್ಳುಳ್ಳಿ ಬೆಳೆಯುತ್ತವೆ. ಟಾಪ್-5ನಲ್ಲಿ ನಾಲ್ಕು ಏಷ್ಯನ್ ದೇಶಗಳೇ ಇವೆ.
ವಿಶ್ವಾದ್ಯಂತ ಹೇಗೆ?
(Pic credit: Google)
ಚೀನಾದಲ್ಲಿ ಅತಿಹೆಚ್ಚು ಬೆಳ್ಳುಳ್ಳಿ ಉತ್ಪಾದನೆ ಆಗುತ್ತದೆ. ವಿಶ್ವದ ಒಟ್ಟು ಉತ್ಪಾದನೆಯಲ್ಲಿ ಚೀನಾದ ಪಾಲು ಶೇ. 70ಕ್ಕೂ ಹೆಚ್ಚು. ಚೀನಾ ನಂತರದ ಸ್ಥಾನ ಭಾರತ ಆಗಿದೆ.
ಚೀನಾ ಬಹುಪಾಲು
(Pic credit: Google)
ಚೀನಾ, ಭಾರತವಲ್ಲದೇ ಬಾಂಗ್ಲಾದೇಶ, ದಕ್ಷಿಣ ಕೊರಿಯಾ ಮತ್ತು ಈಜಿಪ್ಟ್ ಟಾಪ್ 5ನಲ್ಲಿ ಇವೆ. ಒಟ್ಟು 15 ದೇಶಗಳು 1 ಲಕ್ಷ ಟನ್ಗಿಂತ ಹೆಚ್ಚು ಬೆಳ್ಳುಳ್ಳಿ ಬೆಳೆಯುತ್ತವೆ.
15 ಪ್ರಮುಖ ದೇಶಗಳು
(Pic credit: Google)
Next: ವಿದೇಶಗಳಿಗೆ ಹೋಗಿ ವಾಸಿಸಲು ಅತ್ಯುತ್ತಮ ನಗರಗಳ್ಯಾವುವು?
ಇನ್ನಷ್ಟು ನೋಡಿ