ರೈತರಿಗೆ ನೀಡಲಾಗುವ ಕೃಷಿ ಸಾಲಗಳಿಗೆ ಬಡ್ಡಿದರವನ್ನು ಶೇ. 1ಕ್ಕೆ ಇಳಿಸಬೇಕು ಎನ್ನುವ ಬೇಡಿಕೆ ಈ ಕ್ಷೇತ್ರದಲ್ಲಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲ ಆಗಬಹುದು.
Pic credit: Google
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ವರ್ಷಕ್ಕೆ ಒಟ್ಟು 6,000 ರೂ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಇದು ಸಾಕಾಗುವುದಿಲ್ಲ. ಇದನ್ನು 12,000 ರೂಗೆ ಹೆಚ್ಚಿಸಬೇಕು.
Pic credit: Google
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಸಣ್ಣ ರೈತರಿಗೆ ಶೂನ್ಯ ಪ್ರೀಮಿಯಮ್ನ ಬೆಳೆ ವಿಮೆ ಒದಗಿಸಬೇಕು.
Pic credit: Google
ಕೃಷಿ ಯಂತ್ರೋಪಕರಣ, ಬೀಜ, ರಸಗೊಬ್ಬರಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬೇಕು. ಕೀಟನಾಶಕಗಳ ಮೇಲಿನ ಜಿಎಸ್ಟಿಯನ್ನು ಶೇ. 5ಕ್ಕೆ ಇಳಿಸಬೇಕು.
Pic credit: Google
ಹತ್ತಿ, ಎಣ್ಣೆಬೀಜದಂತಹ ಬೆಳೆಗಳು ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಲು ಸಾಧ್ಯವಾಗುವಂತೆ ಉತ್ತಮ ತಳಿ ಬೀಜಗಳನ್ನು ಒದಗಿಸಬೇಕು.
Pic credit: Google
ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಗಮನ ಕೊಡಬೇಕು. ಹೆಚ್ಚು ಅನುದಾನ ಒದಗಿಸಬೇಕು. ಖಾಸಗಿ ಹೂಡಿಕೆಗಳಿಗೆ ಉತ್ತೇಜನ ನೀಡಬೇಕು.
Pic credit: Google
ಯೂರಿಯಾ ಕಡಿಮೆ ಮಾಡಿ, ಫಾಸ್ಫರಸ್, ಪೊಟ್ಯಾಶಿಯಂ, ಜೈವಿಕ ರಸಗೊಬ್ಬರಗಳಿಗೆ ಉತ್ತೇಜನ ನೀಡಬೇಕು. ಜೈವಿಕ ಇಂಧನ, ಎಥನಾಲ್ ಬಳಕೆ ಹೆಚ್ಚಿಸಬೇಕು. ಇವು ಬಜೆಟ್ನಿಂದ ರೈತರಿಗೆ ಇರುವ ನಿರೀಕ್ಷೆಗಳು.