ಬಜೆಟ್ 2025: ಈ 6 ಥೀಮ್​ಗಳ ಮೇಲೆ ಕಣ್ಣು

23 Jan 2025

Pic credit: Google

Vijayasarathy SN

ಫೆಬ್ರುವರಿ 1ರಂದು 2025ರ ಕೇಂದ್ರ ಬಜೆಟ್​ನಿಂದ ನಿರೀಕ್ಷೆಗಳು ಅಪಾರ. ಐಸಿಐಸಿಐ ಬ್ಯಾಂಕ್​ನ ಪರಿಣಿತರು ಈ ಬಜೆಟ್​ನಲ್ಲಿ ಗಮನಹರಿಸಬಹುದಾದ ಆರು ಥೀಮ್​ಗಳನ್ನು ಹೆಸರಿಸಿದ್ದಾರೆ.

ಪರಿಣಿತರ ಅನಿಸಿಕೆ

Pic credit: Google

ವೇತನ ಹೆಚ್ಚಳ ಕಡಿಮೆ ಇರುವುದು, ಹಣದುಬ್ಬರ ಹೆಚ್ಚಿರುವುದು ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಹೀಗಾಗಿ ಸರ್ಕಾರ ಆದಾಯ ತೆರಿಗೆ ಇಳಿಕೆಗೆ ಮುಂದಾಗಬಹುದು ಎಂದು ನಿರೀಕ್ಷಿಸಲಾಗಿದೆ.

ತೆರಿಗೆ ಇಳಿಕೆ

Pic credit: Google

ಬಜೆಟ್​ನಲ್ಲಿ ಆದಾಯ ವೆಚ್ಚದ ಬಗ್ಗೆ ಹೆಚ್ಚು ನಿಗಾ ಇರಿಸುವ ಸಾಧ್ಯತೆ ಇದೆ. ಯಾವ್ಯಾವ ಇಲಾಖೆಗೆ ಎಷ್ಟು ವೆಚ್ಚದ ಅವಶ್ಯಕತೆ ಎಂದು ನೋಡಿಕೊಂಡು ಹಣ ವಿನಿಯೋಗಿಸುವ ಸಾಧ್ಯತೆ ಇದೆ.

ವೆಚ್ಚದ ಮೇಲೆ ನಿಗಾ

Pic credit: Google

ಕಾರ್ಮಿಕರ ಅವಶ್ಯಕತೆ ಇರುವ ಜವಳಿ ಮೊದಲಾದ ಸೆಕ್ಟರ್​ಗೆ ಪಿಎಲ್​​ಐ ಸ್ಕೀಮ್ ಅನ್ನು ಹೆಚ್ಚು ಮುತುವರ್ಜಿಯೊಂದಿಗೆ ಮುಂದುವರಿಸಬಹುದು. ಇದರಿಂದ ಉದ್ಯೋಗಸೃಷ್ಟಿ ಹೆಚ್ಚಾಗಲು ಸಹಾಯವಾಗುತ್ತದೆ.

ಪಿಎಲ್​ಐಗೆ ಒತ್ತು

Pic credit: Google

ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದು ಮತ್ತು ಆರ್ಥಿಕತೆ ಬೆಳೆಯುತ್ತಿರುವುದರಿಂದ ಹೆಚ್ಚೆಚ್ಚು ಉದ್ಯೋಗಸೃಷ್ಟಿಯ ಅವಶ್ಯಕತೆ ಇದೆ. ಕೌಶಲ್ಯಾಭಿವೃದ್ಧಿ ಸ್ಕೀಮ್​ಗಳಿಗೆ ಹೆಚ್ಚು ಗಮನ ಇರಲಿದೆ.

ಉದ್ಯೋಗ ಸೃಷ್ಟಿ

Pic credit: Google

ಸರ್ಕಾರದಿಂದ 11.50 ಲಕ್ಷ ಕೋಟಿ ರೂನಷ್ಟು ಬಂಡವಾಳ ವೆಚ್ಚ ಆಗಬಹುದು. ರಸ್ತೆ ಮತ್ತು ಹೆದ್ದಾರಿ, ರೈಲ್ವೆ ಮತ್ತು ಡಿಫೆನ್ಸ್ ಈ ಮೂರು ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ವೆಚ್ಚ ಇರಬಹುದು.

ಬಂಡವಾಳ ವೆಚ್ಚ

Pic credit: Google

2025-26ಕ್ಕೆ ವಿತ್ತೀಯ ಕೊರತೆ ಶೇ. 4.5 ಎಂದು ಗುರಿ ನಿಗದಿ ಮಾಡಬಹುದು ಎಂದು ಐಸಿಐಸಿಐ ಬ್ಯಾಂಕ್​ನ ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ ಈ ಬಜೆಟ್​ನಲ್ಲಿ.

ವಿತ್ತೀಯ ಕೊರತೆ ಗುರಿ

Pic credit: Google