ಭಾರತದಲ್ಲಿ ಬಜೆಟ್ ಇತಿಹಾಸ, ಮೈಲಿಗಲ್ಲುಗಳು

10 July 2024

Pic credit: Google

Vijayasarathy SN

ಸ್ವತಂತ್ರ ಭಾರತದಲ್ಲಿ ಮೊದಲ ಬಜೆಟ್ ಮಂಡನೆ ಆಗಿದ್ದು 1947ರ ನವಂಬರ್ 26ರಂದು. ಭಾರತದ ಮೊದಲ ಹಣಕಾಸು ಸಚಿವ ಷಣ್ಮುಗಂ ಚೆಟ್ಟಿ ಆ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದರು.

ಸ್ವಾತಂತ್ರ್ಯಾನಂತರ...

Pic credit: Google

ಷಣ್ಮುಖಂ ಚೆಟ್ಟಿ ಪ್ರಸ್ತುತಪಡಿಸಿದ 1947ರ ಬಜೆಟ್​ನ ಗಾತ್ರ 197.39 ಕೋಟಿ ರೂನಷ್ಟಿತ್ತು. ಇದರಲ್ಲಿ ಶೇ. 46ರಷ್ಟು ಹಣವನ್ನು ರಕ್ಷಣಾ ಸೇವೆಗೆ ವಿನಿಯೋಗಿಸಲಾಗಿತ್ತು.

197 ಕೋಟಿ ರೂ ಬಜೆಟ್

Pic credit: Google

ಭಾರತದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಆಗಿದ್ದು ಬ್ರಿಟಿಷರ ಆಳ್ವಿಕೆಯಲ್ಲಿ. 1860ರ ಏಪ್ರಿಲ್ 7ರಂದು ಈಸ್ಟ್ ಇಂಡಿಯಾ ಕಂಪನಿಯ ಆರ್ಥಿಕ ತಜ್ಞ ಜೇಮ್ಸ್ ವಿಲ್ಸನ್ ಬಜೆಟ್ ಮಂಡಿಸಿದ್ದರು.

ಬ್ರಿಟಿಷರ ಕಾಲದಲ್ಲಿ...

Pic credit: Google

1860ರಲ್ಲಿ ಜೇಮ್ಸ್ ವಿಲ್ಸನ್ ಮಂಡಿಸಿದ ಬಜೆಟ್​ನಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆ ಕ್ರಮ ಘೋಷಿಸಲಾಗಿತ್ತು. ಬ್ರಿಟಿಷ್ ಸರಕಾರಕ್ಕೆ ಈ ತೆರಿಗೆ ಪ್ರಮುಖ ಆದಾಯ ಮೂಲವಾಗಿತ್ತು.

ಆದಾಯ ತೆರಿಗೆ

Pic credit: Google

ಚುನಾವಣೆ ಮುಂಚೆ ಮಂಡಿಸಲಾಗುವ ಬಜೆಟ್ ಅನ್ನು ಇಂಟೆರಿಮ್ ಬಜೆಟ್ ಎನ್ನಲಾಗುತ್ತದೆ. 1948-49ರ ವರ್ಷ ಸಾಲಿನಲ್ಲಿ ಷಣ್ಮುಖಂ ಚೆಟ್ಟಿ ಆ ಹೆಸರಿಟ್ಟಿದ್ದರು. ಆ ಬಳಿಕ ಅದೇ ರೂಢಿಯಾಗಿದೆ.

ಮಧ್ಯಂತರ ಬಜೆಟ್

Pic credit: Google

1950-51ರ ಬಜೆಟ್​ನಲ್ಲಿ ಪ್ಲಾನಿಂಗ್ ಕಮಿಷನ್, ಅಥವಾ ಯೋಜನಾ ಆಯೋಗ ರಚನೆಗೆ ಕ್ರಮವನ್ನು ಘೋಷಿಸಲಾಗಿತ್ತು. ದೇಶದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ಈ ಆಯೋಗ ಶಿಫಾರಸು ಮಾಡುವ ಜವಾಬ್ದಾರಿ ಹೊಂದಿತ್ತು.

ಯೋಜನಾ ಆಯೋಗ

Pic credit: Google

1989-90ರ ಬಜೆಟ್​ನಲ್ಲಿ ಇಎಲ್​ಎಸ್​ಎಸ್ ಸ್ಕೀಮ್ ಅನ್ನು ಜಾರಿಗೆ ತಂದಿತು. ಇದಕ್ಕೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಕೊಟ್ಟಿತು. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಲು ಜನರಿಗಿದು ಉತ್ತೇಜನವಾಗಿತ್ತು.

ಷೇರು ಹೂಡಿಕೆಗೆ ಉತ್ತೇಜನ

Pic credit: Google