ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆ ಆಗುತ್ತದೆ. 1947ರಿಂದ ಷಣ್ಮುಖಂ ಚೆಟ್ಟಿಯಿಂದ ಹಿಡಿದು ನಿರ್ಮಲಾ ಸೀತಾರಾಮನ್ವರೆಗೆ ಹಲವರು ಬಜೆಟ್ ಮಂಡಿಸಿದ್ದಾರೆ. ಅತಿಹೆಚ್ಚು ಮಂಡಿಸಿದವರು ಯಾರು?
Pic credit: Google
ಮೊರಾರ್ಜಿ ದೇಸಾಯಿ 10
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಒಟ್ಟು 10 ಬಾರಿ ಬಜೆಟ್ ಮಂಡಿಸಿದ್ದಾರೆ. 1959ರಿಂದ 1963ರವರೆಗೆ, ಹಾಗೂ 1967ರಿಂದ 1969ವರೆಗೆ ವಿತ್ತ ಸಚಿವಾಗಿದ್ದಾಗ 10 ಬಾರಿ ಬಜೆಟ್ ಮಂಡಿಸಿದ್ದಾರೆ.
Pic credit: Google
ಚಿದಂಬರಂ 9
ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮೂರು ಅವಧಿಯಲ್ಲಿ ಒಟ್ಟು 9 ವರ್ಷ ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದಾರೆ. ದೇವೇಗೌಡ ಪ್ರಧಾನಿಯಾಗಿದ್ದಾಗಲೂ ಅವರೇ ಬಜೆಟ್ ಮಂಡಿಸಿದ್ದರು.
Pic credit: Google
ಪ್ರಣಬ್ ಮುಖರ್ಜಿ 8
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಟ್ಟು 8 ಬಾರಿ ಬಜೆಟ್ ಮಂಡಿಸಿದ್ದಾರೆ. 1982ರಿಂದ 1984ರವರೆಗೆ; ಹಾಗೂ 2009ರಿಂದ 2012ರವರೆಗೆ ಈ ಬಜೆಟ್ ಪ್ರಸ್ತುತ ಪಡಿಸಿದ್ದರು.
Pic credit: Google
ಯಶವಂತ್ ಸಿನ್ಹಾ 7
ವಾಜಪೇಯಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಇದ್ದಾಗ 1998ರಿಂದ 2002ರವರೆಗೆ ಹಣಕಾಸು ಸಚಿವರಾಗಿದ್ದ ಯಶವಂತ ಸಿನ್ಹಾ ಒಟ್ಟು 7 ಬಾರಿ ಬಜೆಟ್ ಮಂಡಿಸಿದ್ದರು.
Pic credit: Google
ದೇಶಮುಖ್ 7
ಭಾರತದ ಮೊದಲ ಆರ್ಬಿಐ ಗವರ್ನರ್ ಆಗಿದ್ದ ಸಿ.ಡಿ. ದೇಶಮುಖ್ ಅವರು 1951ರಿಂದ 1956 ರವರೆಗೆ 7 ಬಜೆಟ್ ಮಂಡಿಸಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದ ಆರ್ಥಿಕ ನೀತಿಗಳ ರೂವಾರಿ ಎನಿಸಿದ್ದರು.
Pic credit: Google
ಎನ್ ಸೀತಾರಾಮನ್ 7
ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಈವರೆಗೆ ಸತತ 7 ಬಾರಿ ಬಜೆಟ್ ಮಂಡಿಸಿದ್ದಾರೆ. ಈಗಿನದ್ದು ಅವರಿಗೆ 8ನೇ ಬಜೆಟ್ ಆಗುತ್ತದೆ.