ಎರಡು ದೇಶಗಳ ನಡುವಿನ ಸಂಬಂಧ ಗಟ್ಟಿಯಾಗಲು ರಾಯಭಾರ ಕಚೇರಿ ಅಥವಾ ದೂತಾವಾಸ ಕಚೇರಿಗಳ ಪಾತ್ರ ದೊಡ್ಡದಿರುತ್ತದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಜನರು ಹೋಗಲು ಈ ಕಚೇರಿಗಳು ವೀಸಾ ನೀಡುತ್ತವೆ.
Pic credit: Google
ಭಾರತದಲ್ಲಿ ಐದು ಕಡೆ ಅಮೆರಿಕದ ದೂತಾವಾಸ ಕಚೇರಿಗಳಿವೆ. ನವದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತಾ ಮತ್ತು ಮುಂಬೈನಲ್ಲಿ ಕಚೇರಿಗಳಿವೆ. ಬೆಂಗಳೂರಿನಲ್ಲಿ 6ನೆದು ಆರಂಭವಾಗಿದೆ. ಅಹ್ಮದಾಬಾದ್ನಲ್ಲೂ ಒಂದು ಬರಲಿದೆ.
Pic credit: Google
ಭಾರತದಿಂದ ಅಮೆರಿಕಕ್ಕೆ ಅತಿ ಹೆಚ್ಚು ಜನರು ಹೋಗುವ ನಗರಗಳಲ್ಲಿ ಬೆಂಗಳೂರು ಇದೆ. ಸ್ಯಾನ್ ಫ್ರಾನ್ಸಿಸ್ಕೋಗೆ ಬೆಂಗಳೂರಿನಿಂದ ವಾರದಲ್ಲಿ ಮೂರು ಫ್ಲೈಟ್ಗಳು ಭರ್ತಿಯಾಗಿ ಹೋಗುತ್ತವೆ.
Pic credit: Google
ಬೆಂಗಳೂರಿನಲ್ಲಿ ಕಳೆದ ವರ್ಷ (2024) 8.8 ಲಕ್ಷ ಪಾಸ್ಪೋರ್ಟ್ಗಳನ್ನು ವಿತರಿಸಲಾಗಿದೆ. ಅಮೆರಿಕಕ್ಕೆ ಹೋಗಲು ಬೆಂಗಳೂರಿನಿಂದ ದಿನನಿತ್ಯ 400ಕ್ಕೂ ಹೆಚ್ಚು ವೀಸಾ ಅರ್ಜಿಗಳು ಸಲ್ಲಿಕೆ ಆಗುತ್ತವೆ.
Pic credit: Google
ಬೆಂಗಳೂರಿಗರು ಅಮೆರಿಕದ ವೀಸಾ ಪಡೆಯಬೇಕಾದರೆ ಚೆನ್ನೈ, ಮುಂಬೈ ಅಥವಾ ಹೈದರಾಬಾದ್ನಲ್ಲಿರುವ ದೂತಾವಾಸ ಕಚೇರಿಗಳಿಗೆ ಹೋಗಬೇಕಿತ್ತು. ಈಗ ಇಲ್ಲೇ ಇದು ಸ್ಥಾಪನೆಯಾಗಿರುವುದು ಅನುಕೂಲವಾಗಿದೆ.
Pic credit: Google
ಬೆಂಗಳೂರಿನಲ್ಲಿ ಸದ್ಯ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮಾರಿಯಟ್ ಹೋಟೆಲ್ನಲ್ಲಿ ತಾತ್ಕಾಲಿಕವಾಗಿ ಯುಎಸ್ ಕಾನ್ಸುಲೇಟ್ ಆರಂಭಿಸಲಾಗಿದೆ. ಸದ್ಯದಲ್ಲೇ ಇಲ್ಲಿ ವೀಸಾ ವಿಲೇವಾರಿ ಕಾರ್ಯ ನಡೆಯಲಿದೆ.
Pic credit: Google
ಖಾಯಂ ಅಮೆರಿಕ ದೂತಾವಾಸ ಕಚೇರಿಗಾಗಿ ಸ್ಥಳ ಪರಿಶೋಧನೆ ನಡೆಯುತ್ತಿದೆ. ಐಟಿ ಅಡ್ಡೆಯಾಗಿರುವ ವೈಟ್ಫೀಲ್ಡ್ ಮೊದಲಾದ ಕಡೆ ಜಾಗ ನೋಡಲಾಗಿದೆ. ಇನ್ನೂ ಅಂತಿಮವಾಗಿಲ್ಲ.