ಮನೆಯಲ್ಲಿ ಎಷ್ಟು ನಗದು ಹಣ ಇಡಬಹುದು ಗೊತ್ತೇ?

16 January 2025

Author: Ganapathi Sharma

ಐಟಿ ದಾಳಿಗಳ ಸಂದರ್ಭದಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಮನೆಗಳಿಂದ ಕೋಟ್ಯಂತರ ರೂ. ನಗದು ವಶಪಡಿಸಿರುವುದನ್ನು ನೋಡಿರುತ್ತೇವೆ.

ಹಾಗಾದರೆ, ಎಷ್ಟು ಕರೆನ್ಸಿ ನೋಟುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಮನೆಯಲ್ಲಿ ನಗದು ಹಣ ಇಟ್ಟುಕೊಳ್ಳಲು ಮಿತಿ ಎಷ್ಟಿದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಆದಾಯ ತೆರಿಗೆ ಕಾಯ್ದೆ ಪ್ರಕಾರ, ಮನೆಯಲ್ಲಿ ಇಡುವ ನಗದು ಹಣಕ್ಕೆ ಮಿತಿ ಇರುವುದಿಲ್ಲ. ಎಷ್ಟು ಬೇಕಾದರೂ ಇಡಬಹುದು.

ಆದರೆ, ಮನೆಯಲ್ಲಿ ಇಟ್ಟಿರುವ ನಗದು ಹಣಕ್ಕೆ ಸೂಕ್ತ ದಾಖಲೆಗಳು ಇರಬೇಕು. ಇಲ್ಲದಿದ್ದರೆ ಐಟಿ ಇಲಾಖೆ ಆ ಹಣಕ್ಕೆ ಶೇ 137ರವರೆಗೂ ದಂಡ ವಿಧಿಸಬಹುದು.

ಇಷ್ಟೇ ಅಲ್ಲದೆ, ನಗದು ವಹಿವಾಟಿಗೆ ಸಂಬಂಧಿಸಿ ನಾವು ತಿಳಿಯಲೇಬೇಕಾದ ಇನ್ನೂ ಕೆಲವು ನಿಯಮಗಳಿವೆ.

ಒಂದು ಕುಟುಂಬ ಸದಸ್ಯರು ಒಂದೇ ದಿನ 2 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ನಗದನ್ನು ವಿತ್​ಡ್ರಾ ಮಾಡಲು ನಿರ್ಬಂಧ ಇದೆ.

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಟ್ ಮೂಲಕ ಒಂದೇ ವಹಿವಾಟಿನಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮಾಡುವಂತಿಲ್ಲ.

NEXT - ಹಳೆಯ ಮತ್ತು ಹೊಸ ಟ್ಯಾಕ್ಸ್ ರೆಜಿಮೆ ವ್ಯತ್ಯಾಸ