ವಾರನ್ ಬಫೆಟ್ ಯಶಸ್ಸಿನ 6 ಮಂತ್ರ

10 Feb 2025

Pic credit: Google

Vijayasarathy SN

ಮಾಂತ್ರಿಕ ಬಫೆಟ್

Pic credit: Google

ಅಮೆರಿಕದ ವಾರನ್ ಬಫೆಟ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಷೇರು ಮಾರುಕಟ್ಟೆಯಲ್ಲಿ ಅವರೊಬ್ಬ ಅಪ್ರತಿಮ ಹೂಡಿಕೆದಾರ. ಅವರಿಂದ ಕಲಿಯಬಹುದಾದ ಕೆಲ ಪಾಠಗಳು ಮುಂದಿವೆ...

ಯೋಚನೆಗೆ ಸಮಯ

Pic credit: Google

ಜನರು ಏನಾದರೂ ಚಟುವಟಿಕೆಯಲ್ಲಿ ನಿರತರಾಗಲು ಬಯಸುತ್ತಾರೆ. ಆದರೆ, ವಾರನ್ ಬಫೆಟ್ ಚಿಂತನೆಗೆ ಸಮಯ ಕೊಡುತ್ತಾರೆ. ಇದರಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕಬಹುದು.

ನಿರಂತರ ಓದು

Pic credit: Google

ವಾರನ್ ಬಫೆಟ್ ತಮ್ಮ ಬಹುತೇಕ ದಿನವನ್ನು ಪುಸ್ತಕ ಓದುವುದರಲ್ಲೇ ಕಳೆಯುತ್ತಾರಂತೆ. ಇದರಿಂದ ಪ್ರಖರ ಚಿಂತನೆ ಬೆಳೆಯುತ್ತದೆ. ಆಗುಹೋಗುಗಳು ತಿಳಿಯುತ್ತವಂತೆ. ದಿನಕ್ಕೆ 500 ಪುಟ ಓದಿರಿ ಎನ್ನುತ್ತಾರೆ ಅವರು.

ಸರಳ ಜೀವನ

Pic credit: Google

ವಾರನ್ ಬಫೆಟ್ ಬಳಿ ಅಗಣಿತ ಆಸ್ತಿ ಇದ್ದರೂ ಅವರದ್ದು ಬಹಳ ಸರಳ ಜೀವನ. 1958ರಲ್ಲಿ ಖರೀದಿಸಿದ್ದ ಸಾಧಾರಣ ಮನೆಯಲ್ಲೇ ಈಗಲೂ ವಾಸಿಸುತ್ತಾರೆ. ಆಡಂಬರ ಇಲ್ಲ, ದುಂದುವೆಚ್ಚ ಇಲ್ಲದ ಜೀವನ ಮುಖ್ಯ.

ಸ್ಪಷ್ಟತೆ ಇರಲಿ

Pic credit: Google

ಜ್ಯಾಕ್ ಆಫ್ ಆಲ್ ಎಂದಾಗುವ ಬದಲು ಒಂದು ವಿಷಯದ ಬಗ್ಗೆ ಹೆಚ್ಚು ಗಮನ ಕೊಡುವುದು ವಾರನ್ ಬಫೆಟ್ ಜಾಯಮಾನ. ಹೂಡಿಕೆ ಬಗ್ಗೆಯೇ ಅವರ ಹೆಚ್ಚಿನ ಗಮನ, ಸಮಯ ಮೀಸಲಿರುತ್ತಿತ್ತು.

ಗಾಢ ಸಂಬಂಧಗಳು

Pic credit: Google

ಬದುಕಿದ್ದಾಗ ಕೋಟಿಗೆ ಬಾಳಿದ. ಸತ್ತರೆ ಹೆಗಲು ಕೊಡೋಕೆ ನಾಲ್ಕು ಜನ ಇಲ್ಲ ಎಂಬ ಮಾತು ಕೇಳುತ್ತೇವೆ. ವಾರನ್ ಬಫೆಟ್​ದೂ ಅದೇ ಮಂತ್ರ. ಯಶಸ್ಸನ್ನು ಅಳೆಯೋದು ಸಂಪತ್ತಿನಿಂದಲ್ಲ, ಅರ್ಥಪೂರ್ಣ ಸಂಬಂಧಗಳಿಂದ ಎನ್ನುತ್ತಾರೆ.

ಮಗುವಿನಂತಹ ಮನಸು

Pic credit: Google

ವಾರನ್ ಬಫೆಟ್ ಅಷ್ಟೆಲ್ಲಾ ಹಣ ಸಂಪಾದಿಸಿದರೂ ಅಹಂ ಅವರ ನೆತ್ತಿಗೇರಲಿಲ್ಲ. ಸದಾ ಏನಾದರೂ ಕಲಿಯಬೇಕೆನ್ನುವ ತುಡಿತ ಅವರಲ್ಲಿ ಇದ್ದೇ ಇರುತ್ತದೆ.