ವೆಡ್ಡಿಂಗ್ ಇನ್ಷೂರೆನ್ಸ್ ಅಂದರೇನು? ಅದರ ವ್ಯಾಪ್ತಿ ಏನು?

24 Nov 2023

By: Vijayasarathy SN

ಮದುವೆ ಎಂಬುದು ನಮ್ಮ ಜೀವನದ ಅತ್ಯಂತ ಮಹತ್ವದ ಘಟ್ಟಗಳಲ್ಲಿ ಒಂದು. ಅದಕ್ಕೆ ಆಗುವ ವೆಚ್ಚವೂ ಬಹಳ ದೊಡ್ಡದು.

ಮಹತ್ವದ್ದು

(Pic credit: Google)

ಕೆಲ ನಿರ್ದಿಷ್ಟ ಕಾರಣಗಳಿಗೆ ಮದುವೆ ನಿಂತರೆ ಅಥವಾ ಮುಂದೂಡಿಕೆ ಆದರೆ ಆಗುವ ನಷ್ಟವನ್ನು ಭರಿಸುತ್ತದೆ ವಿವಾಹ ವಿಮೆ.

ಕ್ಲೈಮ್ ಸಾಧ್ಯ

(Pic credit: Google)

ಮದುವೆ ದಿನಕ್ಕೆ ಒಂದು ವಾರ ಹಿಂದಿನಿಂದಲೇ ವೆಡ್ಡಿಂಗ್ ಇನ್ಷೂರೆನ್ಸ್ ಪ್ಲಾನ್​ನ ಕವರೇಜ್ ಶುರುವಾಗುತ್ತದೆ.

ವಾರದಿಂದ...

(Pic credit: Google)

ಮದುವೆ ಹಾಲ್, ಅಡುಗೆ, ಟಿಕೆಟ್ ಇತ್ಯಾದಿ ಸರ್ವಿಸ್​ಗಳಿಗೆ ಕೊಡಲಾದ ಹಣವನ್ನು ಇನ್ಷೂರೆನ್ಸ್ ಕಂಪನಿಯಿಂದ ಕ್ಲೇಮ್ ಮಾಡಬಹುದು.

ಯಾವುದೆಲ್ಲ?

(Pic credit: Google)

ಭೂಕಂಪ, ಅಗ್ನಿಅವಘಡ, ಕಳ್ಳತನ ಇತ್ಯಾದಿಯಿಂದ ಸಮಾರಂಭ ಸ್ಥಳದ ಡೆಕೋರೇಶನ್, ಒಡವೆ ಇತ್ಯಾದಿಗೆ ಆಗುವ ಹಾನಿ ಭರಿಸಬಹುದು.

ನಷ್ಟ ಭರ್ತಿ

(Pic credit: Google)

ಕಾರ್ಯಕ್ರಮದ ವೇಳೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದರೆ ಅದರ ಚಿಕಿತ್ಸಾ ವೆಚ್ಚವನ್ನು ಇನ್ಷೂರೆನ್ಸ್ ಕಂಪನಿಯಿಂದ ಕ್ಲೈಮ್ ಮಾಡಬಹುದು.

ಚಿಕಿತ್ಸಾ ವೆಚ್ಚ

(Pic credit: Google)

ಭಯೋತ್ಪಾದನೆ, ದಂಗೆ, ವಧು ಅಥವಾ ವರನ ಅಪಹರಣ, ವಿಮಾನ ವಿಳಂಬ ಇತ್ಯಾದಿಯಿಂದ ಮದುವೆ ರದ್ದಾದರೆ ಅದಕ್ಕೆ ಕ್ಲೇಮ್ ಅಸಾಧ್ಯ.

ಕ್ಲೇಮ್ ಅಸಾಧ್ಯ

(Pic credit: Google)

ಹಾನಿಯಾದ ಆಸ್ತಿಯ ವಿವರ, ಕಳುವಾದ ಒಡವೆ ಬಿಲ್, ಎಫ್​ಐಆರ್ ಕಾಪಿ, ಮುಂಗಡ ಹಣ ಕೊಟ್ಟಿದ್ದಕ್ಕೆ ದಾಖಲೆ ಇತ್ಯಾದಿ ಒದಗಿಸಬೇಕಾಗಬಹುದು.

ದಾಖಲೆಗಳೇನು?

(Pic credit: Google)