By: Vijayasarathy SN

ರಿಪೋ,  ರಿವರ್ಸ್ ರಿಪೋ ಎಂದರೇನು?

07 June 2024

ಆರ್​ಬಿಐನ ಮಾನಿಟರಿ ಪಾಲಿಸಿ ಕಮಿಟಿ ಸಭೆಯ ವೇಳೆ ರಿಪೋ, ರಿವರ್ಸ್ ರಿಪೋ ದರಗಳ ಬಗ್ಗೆ ಎಲ್ಲರ ಕುತೂಹಲ ಇರುವುದನ್ನು ನೀವು ಗಮನಿಸಿರಬಹುದು. ಯಾವುವು ಈ ರಿಪೋ ದರಗಳು?

ಯಾವುದಿದು ದರ?

(Pic credit: Google)

ರಿಪೋ ಮತ್ತು ರಿವರ್ಸ್ ದರ ಎಂಬುದು ಆರ್​ಬಿಐನ ಬಡ್ಡಿದರಗಳಾಗಿವೆ. ಇವು ಬ್ಯಾಂಕ್​ಗಳ ಬಡ್ಡಿದರಗಳ ಮೇಲೆ ಪ್ರಭಾವ ಬೀರುವುದರಿಂದ ಬಹಳ ಮುಖ್ಯ ಎನಿಸುತ್ತವೆ.

ಮುಖ್ಯವೆನಿಸುವ ರೇಟ್ಸ್

(Pic credit: Google)

ರಿಪೋ ಎಂಬುದು ಇಂಗ್ಲೀಷ್​ನ ರೀಪರ್ಚೇಸಿಂಗ್ ಆಪ್ಷನ್ ಪದದ ಕಿರುರೂಪ. ಮರುಖರೀದಿ ಒಪ್ಪಂದ ಎನ್ನಬಹುದು. ಆರ್​ಬಿಐ ಮತ್ತು ಕಮರ್ಷಿಯಲ್ ಬ್ಯಾಂಕುಗಳ ನಡುವಿನ ಅಗ್ರೀಮೆಂಟ್.

ರಿಪೋ ಎಂದರೇನು?

(Pic credit: Google)

ಕಮರ್ಷಿಯಲ್ ಬ್ಯಾಂಕುಗಳಿಗೆ ಫಂಡಿಂಗ್ ಸಾಲದಾಗ ಆರ್​ಬಿಐನಿಂದ ಸಾಲ ಪಡೆಯುತ್ತವೆ. ಇದಕ್ಕೆ ಆರ್​ಬಿಐ ಬಡ್ಡಿ ವಿಧಿಸುತ್ತದೆ. ಇದುವೇ ರಿಪೋ ದರ.

ರೀಪರ್ಚೇಸಿಂಗ್ ಆಪ್ಷನ್

(Pic credit: Google)

ಆರ್​ಬಿಐನಿಂದ ಸಾಲ ಪಡೆಯುವಾಗ ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿರುವ ಟ್ರೆಷರಿ ಬಿಲ್, ಚಿನ್ನ, ಬಾಂಡ್ ಪೇಪರ್ ಇತ್ಯಾದಿ ಸೆಕ್ಯೂರಿಟಿಗಳನ್ನು ಆರ್​ಬಿಐಗೆ ಮಾರುತ್ತವೆ.

ಆರ್​ಬಿಐಗೆ ಸೆಕ್ಯೂರಿಟೀಸ್

(Pic credit: Google)

ಸಾಲ ಮರುಪಾವತಿ ಮಾಡಿದಾಗ ಬ್ಯಾಂಕುಗಳು ಮತ್ತೆ ತಮ್ಮ ಸೆಕ್ಯೂರಿಟಿಗಳನ್ನು ವಾಪಸ್ ಖರೀದಿಸುತ್ತವೆ. ಇದನ್ನೇ ರೀಪರ್ಚೇಸಿಂಗ್ ಆಪ್ಷನ್ ಎನ್ನುವುದು.

ಮರುಖರೀದಿ ಆಯ್ಕೆ

(Pic credit: Google)

ರಿವರ್ಸ್ ರಿಪೋ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್​ಬಿಐನಲ್ಲಿ ಇರಿಸುವ ಠೇವಣಿಗೆ ಸಿಗುವ ಬಡ್ಡಿದರ ಆಗಿರುತ್ತದೆ. ಸದ್ಯ ಇದು ಶೇ. 3.35ರಷ್ಟಿದೆ.

ರಿವರ್ಸ್ ರಿಪೋ

(Pic credit: Google)

ಹಣದುಬ್ಬರ ನಿಯಂತ್ರಿಸಲು ಆರ್​ಬಿಐ ರಿಪೋ ದರ ಬಳಸುತ್ತದೆ. ರಿಪೋ ದರ ಹೆಚ್ಚಿಸಿದರೆ ಬ್ಯಾಂಕುಗಳು ಸಾಲದ ದರ ಹೆಚ್ಚಿಸುತ್ತವೆ. ಆಗ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆ ಆಗುತ್ತದೆ.

ರಿಪೋ ದರ ಪ್ರಾಮುಖ್ಯತೆ?

(Pic credit: Google)

ಹಣದ ಹರಿವು ಕಡಿಮೆ ಆದರೆ ಖರೀದಿಗೆ ಬೇಡಿಕೆ ಕಡಿಮೆ ಆಗುತ್ತದೆ. ಆಗ ಆ ವಸ್ತುವಿನ ಬೆಲೆ ಕಡಿಮೆ ಆಗುತ್ತದೆ. ಆ ಮೂಲಕ ಹಣದುಬ್ಬರ ನಿಯಂತ್ರಿಸಬಹುದು.

ಹಣದುಬ್ಬರಕ್ಕೆ ಅಂಕೆ

(Pic credit: Google)