23-01-2024
2023ರ ಬಜೆಟ್ನಲ್ಲಿ ಮಾಡಿದ್ದ ಪ್ರಮುಖ ಬದಲಾವಣೆ, ಘೋಷಣೆಗಳೇನು?
Author: ಗಣಪತಿ ಶರ್ಮ
ನೇರ ತೆರಿಗೆ ಪದ್ಧತಿಗೆ 2023ರ ಬಜೆಟ್ನಲ್ಲಿ ಮಹತ್ವದ ಬದಲಾವಣೆ ತರಲಾಗಿತ್ತು. ವೈಯಕ್ತಿಕ ತೆರಿಗೆಗೆ ಆದಾಯದ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಿಸಲಾಗಿತ್ತು.
ಇಪಿಎಫ್ ಹಣ ವಿತ್ಡ್ರಾ ಮೇಲಿನ ಟಿಡಿಎಸ್ ಅನ್ನು ಕಡಿಮೆ ಮಾಡಿ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು.
ಸಿಗರೇಟ್ ಮೇಲಿನ ತೆರಿಗೆ ಹೆಚ್ಚಿಸಲಾಗಿತ್ತು. ಬಟ್ಟೆ, ಗಾರ್ಮೆಂಟ್ ದುಬಾರಿಯಾಗಿತ್ತು.
ದೇಶದಾದ್ಯಂತ ಸ್ಕಿಲ್ ಇಂಡಿಯಾ ಕೇಂದ್ರಗಳನ್ನು ತೆರೆಯಲು ಅನುದಾನ ಘೋಷಣೆ ಮಾಡಲಾಗಿತ್ತು.
ಮೊಬೈಲ್ ಫೋನ್ ಬಿಡಿ ಭಾಗಗಳಾದ ಕ್ಯಾಮರಾ, ಲೆನ್ಸ್ ಇತ್ಯಾದಿಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿಮೆ ಮಾಡಲಾಗಿತ್ತು.
ಹಸಿರೀಕರಣಕ್ಕಾಗಿ 35,000 ಕೋಟಿ ರೂ. ಘೋಷಣೆ ಮಾಡಲಾಗಿತ್ತು.
ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು, ಹೆದ್ದಾರಿ ನಿರ್ಮಾಣ ಮತ್ತಿತರ ಮೂಲಸೌಕರ್ಯ ಯೋಜನೆಗಳಿಗೆ 1.10 ಲಕ್ಷ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು.
ಕೃಷಿ ಸಾಲಕ್ಕಾಗಿ 20 ಲಕ್ಷ ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಸಿರಿಧಾನ್ಯಗಳ ಉತ್ತೇಜನಕ್ಕೆ ‘ಶ್ರೀ ಅನ್ನ’ ಯೋಜನೆ ಘೋಷಿಸಲಾಗಿತ್ತು.
NEXT - ಲಕ್ಷದ್ವೀಪ ಪ್ರವಾಸಕ್ಕೆ ಎಷ್ಟು ಖರ್ಚಾಗುತ್ತೆ? ಹೀಗೊಂದು ಗೈಡ್