17 Feb 2025

Pic credit: Google

ತುಂಬಾ ದಿನ ಕ್ರೆಡಿಟ್ ಕಾರ್ಡ್ ಬಳಸದಿದ್ದರೆ ಏನಾಗುತ್ತೆ?

Vijayasarathy SN

ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಸಿದರೆ ಬಹಳ ಉಪಯೋಗವಾಗುವ ಹಣಕಾಸು ಸಾಧನ. ಆದರೆ, ಬೇಜವಾಬ್ದಾರಿ ತೋರಿದರೆ ಸಾಲದ ಶೂಲಕ್ಕೇರಿಸುವ ಅಪಾಯಕಾರಿ ಸಾಧನವೂ ಹೌದು.

Pic credit: Google

ನಾನಾ ಕಾರಣಗಳಿಗೆ ನಾವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಪಡೆಯುವುದುಂಟು. ಇಂಥ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚು ಬಳಸದೇ ಇರುವ ಸಾಧ್ಯತೆ ಇರುತ್ತದೆ. ಹೀಗಿದ್ದಾಗ ಏನಾಗುತ್ತದೆ?

Pic credit: Google

ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದವರೆಗೆ ಯಾವುದೇ ವಹಿವಾಟು ಕಾಣದ ಕ್ರೆಡಿಟ್ ಕಾರ್ಡ್ ನಿಷ್ಕ್ರಿಯ ಸ್ಥಿತಿಗೆ ಹೋಗಬಹುದು. ಇದರಿಂದ ಕೆಲವಿಷ್ಟು ಹಿನ್ನಡೆ ನಿಮಗೆ ಎದುರಾಗಬಹುದು.

Pic credit: Google

ತುಂಬಾ ದಿನ ನೀವು ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸದಿದ್ದರೆ ಬ್ಯಾಂಕುಗಳು ಅಂಥ ಕಾರ್ಡ್ ಅನ್ನು ಮುಚ್ಚಬಹುದು. ಇದರಿಂದ ನಿಮ್ಮ ಕ್ರೆಡಿಟ್ ಹಿಸ್ಟರಿ ಮೇಲೆ ಪರಿಣಾಮ ಆಗಬಹುದು.

Pic credit: Google

ಕ್ರೆಡಿಟ್ ಕಾರ್ಡ್ ಬಳಕೆಯಿಂದ ರಿವಾರ್ಡ್ಸ್, ಕ್ಯಾಷ್​ಬ್ಯಾಕ್ ಇತ್ಯಾದಿ ಸಿಗುತ್ತದೆ. ನೀವು ಕಾರ್ಡ್ ಬಳಸದೇ ಹೋದರೆ ಈ ರಿವಾರ್ಡ್ ಅವಕಾಶ ಕೈತಪ್ಪುತ್ತದೆ.

Pic credit: Google

ನಿಮ್ಮ ಕ್ರೆಡಿಟ್ ಕಾರ್ಡ್ ಡೀಆ್ಯಕ್ಟಿವೇಟ್ ಮಾಡಿದರೆ ಬ್ಯಾಂಕುಗಳು ನಿಮಗೆ ಅದನ್ನು ರೀಆ್ಯಕ್ಟಿವೇಟ್ ಮಾಡಲು ಕೆಲ ದಿನ ಕಾಲಾವಕಾಶ ಕೊಡುತ್ತದೆ. ಅಲ್ಲಿಯವರೆಗೆ ಈ ಅಕೌಂಟ್​ಗಳನ್ನು ಪ್ರತ್ಯೇಕ ಲೆಡ್ಜರ್​ನಲ್ಲಿಡಲಾಗುತ್ತದೆ.

Pic credit: Google

ನೀವು ಕಾರ್ಡ್ ಸಕ್ರಿಯಗೊಳಿಸಬೇಕಾದರೆ ಬ್ಯಾಂಕ್ ಕಚೇರಿಗೆ ಹೋಗಿ ಮನವಿ ಸಲ್ಲಿಸಬೇಕು. ಅಥವಾ ಆನ್​ಲೈನ್ ಸರ್ವಿಸ್ ಪೋರ್ಟಲ್ ಮೂಲಕವೂ ಮನವಿ ಸಲ್ಲಿಸಬಹುದು. ಕೆವೈಸಿ ದಾಖಲೆ ನೀಡಬೇಕಾಗಬಹುದು.

Pic credit: Google