27 June 2024

"ಡಿಕೆ ಶಿವಕುಮಾರ್​ ಸಿಎಂ ಆಗಬೇಕಾಗಿರುವುದು ಧರ್ಮ"; ಚಂದ್ರಶೇಖರ್ ಸ್ವಾಮೀಜಿ

Author :Akshatha Vorkady

ನಾಡಪ್ರಭು ಕೆಂಪೇಗೌಡ

ಇಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ. ರಾಜ್ಯದಾದ್ಯಂತ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 

ಚಂದ್ರಶೇಖರ್ ಸ್ವಾಮೀಜಿ

ವಿಧಾನಸೌಧ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಂದ್ರಶೇಖರ್ ಸ್ವಾಮೀಜಿ.

ಸ್ವಾಮೀಜಿಯ ಹೇಳಿಕೆ

ಈ ವೇಳೆ ಚಂದ್ರಶೇಖರ್ ಸ್ವಾಮೀಜಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ .

ವಿಶೇಷ ಬೇಡಿಕೆ

ಕಾರ್ಯಕ್ರಮದ ವೇದಿಕೆಯಲ್ಲೇ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿಶೇಷ ಬೇಡಿಕೆ ಇಟ್ಟಿದ್ದಾರೆ.

ಒಕ್ಕಲಿಗರ ಮಹಾ ಸಂಸ್ಥಾನ ಮಠ

ನಮ್ಮ ಸಮುದಾಯದ ಡಿ.ಕೆ.ಶಿವಕುಮಾ‌ರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿಎಂಗೆ ಮನವಿ ಮಾಡಿದ ಸ್ವಾಮೀಜಿ

ಮುಖ್ಯಮಂತ್ರಿ ಸ್ಥಾನ

 "ಮುಖ್ಯಮಂತ್ರಿ ಸ್ಥಾನ ಅನುಭವಿಸಿರುವ ಸಿದ್ದರಾಮಯ್ಯನವರು ಇನ್ನುಳಿದ ಅವಧಿಯನ್ನು ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಬೇಕು"

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ

 ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಾಧ್ಯ  ಎಂದ ಚಂದ್ರಶೇಖರ್ ಸ್ವಾಮೀಜಿ

ಸಿದ್ದರಾಮಯ್ಯ ಪ್ರತಿಕ್ರಿಯೆ

ಇದಕ್ಕೆ ವೇದಿಕೆಯಲ್ಲೇ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಸಿಎಂ ಆಯ್ಕೆಯನ್ನು ಹೈಕಮಾಂಡ್​​​ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.