ಬಿಗ್​ಬಾಸ್ ಸೀಸನ್ 10ರ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಬಗ್ಗೆ ನಿಮಗೆ ಗೊತ್ತಿದೆಯೆ?

15 OCT 2023

ತನಿಷಾ ಕುಪ್ಪಂಡ ಕೊಡಗಿನ ಬೆಡಗಿ, ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಪದವಿ ಪಡೆದಿದ್ದು ಎನ್​ಎಂಕೆಆರ್​ವಿ ಮಹಿಳಾ ಕಾಲೇಜಿನಲ್ಲಿ.

ಕೊಡಗಿನ ಬೆಡಗಿ

ಧಾರಾವಾಹಿಗಳ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ತನಿಷಾ, 'ಪಾರಿಜಾತ' ಸಿನಿಮಾದಲ್ಲಿ ದಿಗಂತ್​ರ ತಂಗಿಯ ಪಾತ್ರದಲ್ಲಿ ನಟಿಸಿದರು. ಇದು ಅವರ ಮೊದಲ ಸಿನಿಮಾ.

ಧಾರಾವಾಹಿ-ಸಿನಿಮಾ

ಬಿಗ್​ಬಾಸ್ ಸೀಸನ್ 10ರ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಬಗ್ಗೆ ನಿಮಗೆ ಗೊತ್ತಿದೆಯೆ?

ಸಾಲು-ಸಾಲು ಸಿನಿಮಾ

'ಹೇಳಿ ಹೋಗು ಕಾರಣ' ಧಾರಾವಾಹಿಯಲ್ಲಿ ತನಿಷಾ ನಟಿಸಿದ್ದರು, ಈ ಧಾರಾವಾಹಿ ಪ್ರಸಾರವಾಗಲಿಲ್ಲ, ಬಳಿಕ 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ಜೆಕೆ ಗರ್ಲ್​ಫ್ರೆಂಡ್ ಪಾತ್ರದಲ್ಲಿ ನಟಿಸಿದರು ತನಿಷಾ.

'ಅಶ್ವಿನಿ ನಕ್ಷತ್ರ'

ತನಿಷಾಗೆ ಹೆಸರು ತಂದುಕೊಟ್ಟ ಧಾರಾವಾಹಿಗಳೆಂದರೆ 'ಸತ್ಯಂ ಶಿವಂ ಸುಂದರಂ' ಹಾಗೂ 'ಮಂಗಳ ಗೌರಿ' ಈ ಧಾರಾವಾಹಿಗಳ ಜೊತೆಗೆ ತಮಿಳು, ತೆಲುಗು ಧಾರಾವಾಹಿಗಳಲ್ಲಿಯೂ ತನಿಷಾ ನಟಿಸಿದ್ದಾರೆ.

'ಮಂಗಳ ಗೌರಿ'

ಕೋಮಲ್ ಜೊತೆಗೆ 'ಉಂಡೆನಾಮ' ಸಿನಿಮಾದಲ್ಲಿ ನಟಿಸಿದರು. ಬಳಿಕ 'ಪೆಂಟಗಾನ್' ಹೆಸರಿನ ಅಂಥಾಲಜಿ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದರಲ್ಲಿ ತುಸು ಬೋಲ್ಡ್ ಪಾತ್ರ ತನಿಷಾರದ್ದು.

ಬೋಲ್ಡ್ ಪಾತ್ರ

ಇದರ ಜೊತೆಗೆ ತಮಿಳಿನ 'ಸಂಡ್ರಿದಲ್' ಸಿನಿಮಾದಲ್ಲಿ ನಟಿಸಿದ್ದಾರೆ. 'ಎನ್ ಕಾದಲೆ' ಹಾಗೂ ಇನ್ನೊಂದು ತಮಿಳು ಸಿನಿಮಾದಲ್ಲಿ ಸೋಲೋ ಸಾಂಗ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಮಿಳು ಸಿನಿಮಾ

ದಿನಕರ್ ತೂಗುದೀಪ ನಿರ್ದೇಶನ ಮಾಡುತ್ತಿರುವ 'ರಾಯಲ್' ಹೆಸರಿನ ಸಿನಿಮಾದಲ್ಲಿಯೂ ನಟಿಸಿರುವ ತನಿಷಾ, 'ಉಸಿರೇ' ಹೆಸರಿನ ಮತ್ತೊಂದು ಸಿನಿಮಾಕ್ಕೆ ನಾಯಕಿ ಸಹ.

ದಿನಕರ್ ತೂಗುದೀಪ

ಲೇಡಿ ಸಿಂಘಂ ಎಂಟ್ರಿ: ಪೊಲೀಸ್ ಸಮವಸ್ತ್ರ ಧರಿಸಿದ ನಟಿ ದೀಪಿಕಾ ಪಡಕೋಣೆ