14 ಸಿಕ್ಸರ್: ರಣಜಿಯಲ್ಲಿ ಅಬ್ಬರಿಸುತ್ತಿರುವ 12th ಫೇಲ್ ಸಿನಿಮಾ ನಿರ್ದೇಶಕನ ಮಗ

14 ಸಿಕ್ಸರ್: ರಣಜಿಯಲ್ಲಿ ಅಬ್ಬರಿಸುತ್ತಿರುವ 12th ಫೇಲ್ ಸಿನಿಮಾ ನಿರ್ದೇಶಕನ ಮಗ

21 January 2024

Author: Vinay Bhat

TV9 Kannada Logo For Webstory First Slide

ಬಾಲಿವುಡ್'ನ ಹಿಟ್ 12ನೇ ಫೇಲ್ ಸಿನಿಮಾ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರ ಪುತ್ರ ಅಗ್ನಿ ಚೋಪ್ರಾ ರಣಜಿ ಟ್ರೋಫಿಯಲ್ಲಿ ಸತತ ಮೂರನೇ ಶತಕ ಬಾರಿಸಿದ್ದಾರೆ.

ವಿಧು ಚೋಪ್ರಾ

ಈ ಋತುವಿನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಅಗ್ನಿ ಚೋಪ್ರಾ 3 ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ. ಪ್ರತಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದಾರೆ.

3 ಪಂದ್ಯ 3 ಶತಕ

ಅಗ್ನಿ ಅವರು ಅರುಣಾಚಲ ಪ್ರದೇಶದ ವಿರುದ್ಧ ತಮ್ಮ ಮೂರನೇ ಶತಕ ಗಳಿಸುವ ಮೂಲಕ ತಮ್ಮ ತಂಡ ಮಿಜೋರಾಂನ ಮೊದಲ ಗೆಲುವಿಗೆ ಕಾರಣರಾದರು.

ಮೂರನೇ ಶತಕ

ಇದಕ್ಕೂ ಮೊದಲು, ರಣಜಿ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವಾಡುವಾಗ ಸಿಕ್ಕಿಂ ವಿರುದ್ಧ ಮೊದಲ ಶತಕ ಗಳಿಸಿದ್ದರು. ಬಳಿಕ ನಾಗಾಲ್ಯಾಂಡ್ ವಿರುದ್ಧದ ಎರಡನೇ ಶತಕ ಬಂತು.

ಉಳಿದ ಶತಕ

25ರ ಹರೆಯದ ಅಗ್ನಿ ಚೋಪ್ರಾ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ 93.50 ಸರಾಸರಿಯಲ್ಲಿ 72 ಬೌಂಡರಿ ಮತ್ತು 14 ಸಿಕ್ಸರ್‌ಗಳನ್ನು ಒಳಗೊಂಡಂತೆ 561 ರನ್ ಗಳಿಸಿದ್ದಾರೆ.

14 ಸಿಕ್ಸರ್

ಅಗ್ನಿ ಚೋಪ್ರಾ ಮೊದಲು ಮುಂಬೈ ಪರ ಆಡುತ್ತಿದ್ದರು. ಆದರೆ ಅಲ್ಲಿ ಸಾಕಷ್ಟು ಅವಕಾಶಗಳು ಸಿಗದ ಕಾರಣ ಮಿಜೋರಾಂ ತಂಡ ಸೇರಿಕೊಂಡರು.

ಮುಂಬೈನಲ್ಲಿ ಅವಕಾಶವಿಲ್ಲ

ಮಿಜೋರಾಂಗಾಗಿ ತಮ್ಮ ಲಿಸ್ಟ್ A ಮತ್ತು ಚೊಚ್ಚಲ ಟಿ20 ಪಂದ್ಯವನ್ನು ಆಡಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ 7 ಪಂದ್ಯಗಳಲ್ಲಿ 174 ರನ್ ಗಳಿಸಿದ್ದಾರೆ.

ಲಿಸ್ಟ್ ಎ-ಟಿ20 ಪಂದ್ಯ