ಭಾರತ-ಇಂಗ್ಲೆಂಡ್ ಟೆಸ್ಟ್'ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರು ಯಾರು?

22-January-2024

Author: Vinay Bhat

ಸಚಿನ್ ಇಂಡೋ-ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಲ್ಲಿ 7 ಶತಕಗಳೊಂದಿಗೆ 2535 ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ.

ಸಚಿನ್ ತೆಂಡೂಲ್ಕರ್

ಜೋ ರೂಟ್ ಕೇವಲ 25 ಪಂದ್ಯಗಳಲ್ಲಿ 63.15 ಸರಾಸರಿ ಮತ್ತು 9 ಶತಕಗಳ ಜೊತೆ 2626 ರನ್'ಗಳೊಂದಿಗೆ ಭಾರತ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ.

ಜೋ ರೂಟ್

ಗವಾಸ್ಕರ್ ಇಂಗ್ಲೆಂಡ್ ವಿರುದ್ಧ 38 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ನಾಲ್ಕು ಶತಕಗಳೊಂದಿಗೆ 38.20 ಸರಾಸರಿಯಲ್ಲಿ 2483 ರನ್ ಗಳಿಸಿದ್ದಾರೆ.

ಸುನಿಲ್ ಗವಾಸ್ಕರ್

ಅಲೈಸ್ಟರ್ ಕುಕ್ ಇಂಗ್ಲೆಂಡ್ ವಿರುದ್ಧ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಏಳು ಶತಕಗಳೊಂದಿಗೆ 45.83 ಸರಾಸರಿಯಲ್ಲಿ 2431 ರನ್ ಗಳಿಸಿದ್ದಾರೆ.

ಅಲೈಸ್ಟರ್ ಕುಕ್

ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 30 ಟೆಸ್ಟ್ ಪಂದ್ಯಗಳಲ್ಲಿ 42.36 ಸರಾಸರಿ, ಐದು ಶತಕಗಳೊಂದಿಗೆ 1991 ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ

ರಾಹುಲ್ ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 21 ಪಂದ್ಯಗಳಲ್ಲಿ ಏಳು ಶತಕಗಳೊಂದಿಗೆ 60.93 ಸರಾಸರಿಯಲ್ಲಿ 1950 ರನ್ ಗಳಿಸಿದ್ದಾರೆ.

ರಾಹುಲ್ ದ್ರಾವಿಡ್

ಗುಂಡಪ್ಪ ವಿಶ್ವನಾಥ್ ಅವರು ಇಂಗ್ಲೆಂಡ್ ವಿರುದ್ಧ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ನಾಲ್ಕು ಶತಕಗಳೊಂದಿಗೆ 43.47 ಸರಾಸರಿಯಲ್ಲಿ 1880 ರನ್ ಗಳಿಸಿದ್ದಾರೆ.

ಗುಂಡಪ್ಪ ವಿಶ್ವನಾಥ್

ಪೂಜಾರ ಅವರು ಇಂಗ್ಲೆಂಡ್ ವಿರುದ್ಧ 27 ಪಂದ್ಯಗಳಲ್ಲಿ ನಾಲ್ಕು ಶತಕಗಳೊಂದಿಗೆ 39.51 ಸರಾಸರಿಯಲ್ಲಿ 1778 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಚೇತೇಶ್ವರ ಪೂಜಾರ