21-01-2024

ಅಂಡರ್-19 ಕ್ರಿಕೆಟ್ ಆಡದೆ ಟೀಮ್ ಇಂಡಿಯಾ ಪ್ರವೇಶಿಸಿದ 3 ದಿಗ್ಗಜರು

Author: Vinay Bhat

ಎಂಎಸ್ ಧೋನಿ

ಧೋನಿ ಭಾರತ U19 ತಂಡದ ಪರವಾಗಿ ಈವರೆಗೆ ಒಂದೇ ಒಂದು ಪಂದ್ಯ ಆಡಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಭಾರತ ಎ ಪರ ಆಡಿ ರಾಷ್ಟ್ರೀಯ ತಂಡ ಸೇರಿಕೊಂಡರು.

ಧೋನಿ ಏಕದಿನ

2004 ರಲ್ಲಿ ತಮ್ಮ ಮೊದಲ ODI ಪಂದ್ಯ ಆಡಿದ ಇವರು 350 ಏಕದಿನದಲ್ಲಿ ಕಣಕ್ಕಿಳಿದಿದ್ದಾರೆ. 200 ODIಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದರು.

ಧೋನಿ ಟೆಸ್ಟ್

2005ರಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿ 90 ಪಂದ್ಯಗಳನ್ನು ಆಡಿದ್ದರು. ಐಸಿಸಿ ಶ್ರೇಯಾಂಕದಲ್ಲಿ ಟೆಸ್ಟ್ ತಂಡವನ್ನು ಅಗ್ರಸ್ಥಾನಕ್ಕೆ ಮುನ್ನಡೆಸಿದ ಮೊದಲ ನಾಯಕ ಧೋನಿ.

ಧೋನಿ ನಿವೃತ್ತಿ

ಧೋನಿ 2014 ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಅವರ ನಿವೃತ್ತಿಯ ಸಮಯದಲ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರು.

ಸಚಿನ್ ತೆಂಡೂಲ್ಕರ್

ತೆಂಡೂಲ್ಕರ್ ಅವರು ಜೂನಿಯರ್ ತಂಡದಲ್ಲಿ ಆಡದೆ ಭಾರತಕ್ಕಾಗಿ ಆಡಿದ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ಒಬ್ಬರು. ಇವರು ರಣಜಿ ಟ್ರೋಫಿಯನ್ನು ಆಡಿದ್ದಾರೆ.

ಸಚಿನ್ ತೆಂಡೂಲ್ಕರ್

ತೆಂಡೂಲ್ಕರ್ 1989 ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಮತ್ತು ODI ಪದಾರ್ಪಣೆ ಮಾಡಿದರು. ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಸಚಿನ್ 463 ODIಗಳಲ್ಲಿ 18426 ರನ್ ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್

ತೆಂಡೂಲ್ಕರ್ 24 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಸಚಿನ್ 200 ಟೆಸ್ಟ್‌ಗಳಲ್ಲಿ 15921 ರನ್ ಗಳಿಸಿದ್ದಾರೆ. ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ಆರ್ ಅಶ್ವಿನ್

ಅಶ್ವಿನ್ ತಮಿಳುನಾಡು ಪರ ಜೂನಿಯರ್ ಕ್ರಿಕೆಟ್ ಆಡಿದ್ದರು ಆದರೆ ಅವರು ಭಾರತ U19 ತಂಡದಲ್ಲಿ ಆಡಲಿಲ್ಲ. 2010 ರಲ್ಲಿ ODI ಪದಾರ್ಪಣೆ ಮಾಡಿದರು.

ಆರ್ ಅಶ್ವಿನ್

2017 ರಿಂದ ಹೆಚ್ಚಾಗಿ ಟೆಸ್ಟ್ ಫಾರ್ಮ್ಯಾಟ್ ಆಟಗಾರರಾಗಿದ್ದಾರೆ. ODI ಮತ್ತು T20I ಗಳಿಂದ ಹೊರಗುಳಿದಿದ್ದಾರೆ. ಅವರು ಐಸಿಸಿ ಈವೆಂಟ್‌ನಲ್ಲಿ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದಾರೆ.

ಆರ್ ಅಶ್ವಿನ್

95 ಟೆಸ್ಟ್ ಪಂದ್ಯಗಳಲ್ಲಿ 490 ವಿಕೆಟ್ ಕಬಳಿಸಿದ್ದು, 500 ವಿಕೆಟ್ ಗಳ ಗಡಿಯನ್ನು ಸಮೀಪಿಸಿದ್ದಾರೆ. ಅಶ್ವಿನ್ 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಪಡೆದಿದ್ದಾರೆ.