IPL 2025: ಮುಂದಿನ ಐಪಿಎಲ್‌ನಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಗೊತ್ತಾ?

21 July 2024

Pic credit: Google

ಪೃಥ್ವಿ ಶಂಕರ

Pic credit: Google

17ನೇ ಆವೃತ್ತಿಯ ಐಪಿಎಲ್​ಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಈ ಹರಾಜಿನ ನಂತರ ಎಲ್ಲಾ 10 ಐಪಿಎಲ್ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ.

Pic credit: Google

ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಕೇವಲ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದ್ದು, ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗಿದೆ.

Pic credit: Google

ಹೀಗಾಗಿ ಎಲ್ಲಾ ತಂಡಗಳಲ್ಲಿ ಹೊಸ ಹೊಸ ಆಟಗಾರರ ಆಗಮನವಾಗಲಿದೆ. ಇನ್ನು ಕೆಲವು ತಂಡಗಳಲ್ಲಿ ನಾಯಕತ್ವ ಬದಲಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಸ್ಟಾರ್ ಆಟಗಾರರು ಹೊಸ ತಂಡದ ನಾಯಕತ್ವವಹಿಸಿಕೊಳ್ಳುವ ಸಾಧ್ಯತೆಯೂ ಇದೆ.

Pic credit: Google

ಸದ್ಯದ ವರದಿಯ ಪ್ರಕಾರ ಮುಂದಿನ ಆವೃತ್ತಿ ಆರಂಭಕ್ಕೂ ಮೊದಲು ಅನೇಕ ಸ್ಟಾರ್ ಆಟಗಾರರು ತಮ್ಮ ತಂಡವನ್ನು ಬದಲಾಯಿಸುವ ಸುದ್ದಿ ಇದೆ. ಅಷ್ಟೇ ಅಲ್ಲ, ಮುಂದಿನ ಸೀಸನ್‌ನಲ್ಲಿ 4 ತಂಡಗಳ ನಾಯಕರು ಬದಲಾಗುವ ಸಾಧ್ಯತೆ ಇದೆ.

Pic credit: Google

ಮಾಧ್ಯಮ ವರದಿಗಳ ಪ್ರಕಾರ, ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಸಿಎಸ್‌ಕೆ ಸೇರುವ ಸಾಧ್ಯತೆಯಿದೆ.

Pic credit: Google

ರಿಷಬ್ ಪಂತ್ ಡೆಲ್ಲಿ ತಂಡವನ್ನು ತೊರೆದರೆ, ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಬರಬಹುದು ಎಂದು ಹೇಳಲಾಗುತ್ತಿದೆ.

Pic credit: Google

ಸೂರ್ಯಕುಮಾರ್ ಹೊರತಾಗಿ, ರೋಹಿತ್ ಶರ್ಮಾ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಗುಜರಾತ್ ಟೈಟಾನ್ಸ್ ಸೇರುವ ಸಾಧ್ಯತೆ ಇದೆ.

Pic credit: Google

ಪ್ರಸ್ತುತ ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕರಾಗಿರುವ ಕೆಎಲ್ ರಾಹುಲ್ ತಂಡವನ್ನು ತೊರೆದು ಆರ್‌ಸಿಬಿ ನಾಯಕರಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ.

Pic credit: Google

ಇದೆಲ್ಲದರ ನಡುವೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಮಾಲೀಕರು ಬದಲಾಗುವ ಬಗ್ಗೆ ಸುದ್ದಿಯಿದ್ದು, ಅದಾನಿ ಗ್ರೂಪ್ ಈ ಫ್ರಾಂಚೈಸಿಯನ್ನು ಖರೀದಿಸಬಹುದು ಎಂದು ಹೇಳಲಾಗುತ್ತಿದೆ.