18-02-2024

ಭಾರತದಲ್ಲಿ 200 ಟೆಸ್ಟ್ ವಿಕೆಟ್‌ ಕಿತ್ತ 5 ಬೌಲರ್‌ಗಳು ಇವರೇ ನೋಡಿ

Author: Vinay Bhat

ಅನಿಲ್ ಕುಂಬ್ಳೆ

ಕರ್ನಾಟಕದ ಅನಿಲ್ ಕುಂಬ್ಳೆ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಭಾರತದಲ್ಲಿ 350 ವಿಕೆಟ್ ಪಡೆದಿದ್ದಾರೆ.

ಅನಿಲ್ ಕುಂಬ್ಳೆ

ಒಟ್ಟಾರೆಯಾಗಿ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸ್ವರೂಪದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಭಾರತದಲ್ಲಿ 347 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಅನಿಲ್ ಕುಂಬ್ಳೆ ನಂತರ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಕೂಡ ಆಗಿದ್ದಾರೆ.

ಹರ್ಭಜನ್ ಸಿಂಗ್

ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಶ್ರೇಷ್ಠ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾರತದಲ್ಲಿ 269 ವಿಕೆಟ್ ಪಡೆದಿದ್ದಾರೆ.

ಕಪಿಲ್ ದೇವ್

ಕಪಿಲ್ ದೇವ್ ಭಾರತ ಮಾತ್ರವಲ್ಲದೆ ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರು ಮತ್ತು ಇದುವರೆಗೆ ಆಟವಾಡಿದ ಅತ್ಯುತ್ತಮ ನಾಯಕರಲ್ಲಿ ಒಬ್ಬರು.

ಕಪಿಲ್ ದೇವ್

ಕಪಿಲ್ ಈ ಪಟ್ಟಿಯಲ್ಲಿರುವ ಏಕೈಕ ವೇಗಿ, ಮತ್ತು ವೇಗದ ಬೌಲರ್‌ಗಳಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಕೂಡ ಆಗಿದ್ದಾರೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ ಅವರು ಟೆಸ್ಟ್‌ನಲ್ಲಿ ಭಾರತದಲ್ಲಿ 200 ವಿಕೆಟ್‌ಗಳನ್ನು ಉರುಳಿಸಿದ ಸಾಧನೆ ಮಾಡಿದ್ದಾರೆ. ಎಡಗೈ ಸ್ಪಿನ್ನರ್ ಪಟ್ಟಿಯಲ್ಲಿ ಜಡೇಜಾ ಮಾತ್ರ ಇದ್ದಾರೆ.