08-05-2024

IPL: ಭಾರತದ ಪರ ಆಡಲು ಅವಕಾಶವೇ ಸಿಗದ ಐಪಿಎಲ್ ಸ್ಟಾರ್​ಗಳಿವರು

Author: ಪೃಥ್ವಿ ಶಂಕರ

ಐಪಿಎಲ್‌ನಲ್ಲಿ ಅಬ್ಬರಿಸಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಹಲವಾರು ಕ್ರಿಕೆಟಿಗರಿದ್ದಾರೆ. ಆದರೆ ಐಪಿಎಲ್​ನಲ್ಲೂ ಮಿಂಚಿಯೂ ಭಾರತ ತಂಡದಲ್ಲಿ ಅವಕಾಶ ವಂಚಿತರಾದ ನತದೃಷ್ಟ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

81 ಐಪಿಎಲ್ ಪಂದ್ಯಗಳಲ್ಲಿ 825 ರನ್ ಬಾರಿಸಿರುವ ರಾಹುಲ್ ತೆವಾಟಿಯಾ ಅವರ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಬೌಲಿಂಗ್​ನಲ್ಲಿ 32 ವಿಕೆಟ್‌ಗಳನ್ನು ಪಡೆದಿರುವ ತೆವಾಟಿಯಾಗೆ ಭಾರತದ ಪರ ಆಡಲು ಅವಕಾಶ ಸಿಗಲಿಲ್ಲ.

39 ಪಂದ್ಯಗಳಲ್ಲಿ 798 ರನ್ ಬಾರಿಸಿದ್ದ ಮನ್ವಿಂದರ್ ಬಿಸ್ಲಾಗೂ ಟೀಂ ಇಂಡಿಯಾದಲ್ಲಿ ಆಡಲು ಸಾಧ್ಯವಾಗಲಿಲ್ಲ.

ಪಾಲ್ ವಾಲ್ತಾಟಿ 23 ಐಪಿಎಲ್ ಪಂದ್ಯಗಳಲ್ಲಿ 505 ರನ್ ಬಾರಿಸಿದ್ದಾರೆ. ಅವರಿಗೂ ಭಾರತ ಪರ ಆಡುವ ಅವಕಾಶ ಸಿಗಲಿಲ್ಲ

56 ಐಪಿಎಲ್ ಪಂದ್ಯಗಳಲ್ಲಿ 1083 ರನ್ ಬಾರಿಸಿರುವ ಮನನ್ ವೋಹ್ರಾ ಕೂಡ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಅವಕಾಶವನ್ನೇ ಪಡೆಯಲಿಲ್ಲ.

ಪ್ರವೀಣ್ ತಾಂಬೆ 33 ಐಪಿಎಲ್ ಪಂದ್ಯಗಳಲ್ಲಿ 28 ವಿಕೆಟ್ ಪಡೆದಿದ್ದಾರೆ. ಪಂದ್ಯವೊಂದರಲ್ಲಿ ಹ್ಯಾಟ್ರಿಕ್ ಕೂಡ ಅವರ ಹೆಸರಿನಲ್ಲಿ ದಾಖಲಾಗಿದೆ. ಆದರೂ ಭಾರತ ಪರ ಆಡುವ ಅವಕಾಶ ಸಿಗಲಿಲ್ಲ.

ಶ್ರೇಯಸ್ ಗೋಪಾಲ್ 49 ಐಪಿಎಲ್ ಪಂದ್ಯಗಳಲ್ಲಿ 49 ವಿಕೆಟ್ ಪಡೆದಿರುವ ಕರ್ನಾಟಕದ ಈ ಸ್ಪಿನ್ನರ್​ಗೂ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಲಾಗುತ್ತಿಲ್ಲ.

ರಾಜಸ್ಥಾನ್ ರಾಯಲ್ಸ್ ಪರ 76 ಪಂದ್ಯಗಳಲ್ಲಿ 65 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿರುವ ಸಿದ್ಧಾರ್ಥ್ ತ್ರಿವೇದಿಗೂ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ರಜತ್ ಭಾಟಿಯಾ 87 ಐಪಿಎಲ್ ಪಂದ್ಯಗಳಲ್ಲಿ 334 ರನ್ ಮತ್ತು 61 ವಿಕೆಟ್ ಬಾರಿಸಿದ್ದರಯ. ಆದರೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ.

ಚೆನ್ನೈ, ಗುಜರಾತ್ ಮತ್ತು ಆರ್‌ಸಿಬಿಯ ಭಾಗವಾಗಿದ್ದ ಶಾದಾಬ್ ಜಕಾತಿ 47 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದರು. ಅವರಿಗೂ ಟೀಂ ಇಂಡಿಯಾದ ಕದ ತೆರೆಯಲಿಲ್ಲ.

NEXT: IPL 2024: ಈ 10 ಆಟಗಾರರಿಗೆ ಇದು ಕೊನೆಯ ಸೀಸನ್