02-10-2023

ICC World Cup: ಉದ್ಘಾಟನಾ ಸಮಾರಂಭಕ್ಕೆ ಮೋದಿ ಸ್ಟೇಡಿಯಂ ರೆಡಿ

ಉದ್ಘಾಟನಾ ಸಮಾರಂಭ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 5ಕ್ಕೆ ಇಂಗ್ಲೆಂಡ್-ನ್ಯೂಜಿಲೆಂಡ್ ಮೊದಲ ಪಂದ್ಯ ನಡೆಯಲಿದೆ.

ಅಕ್ಟೋಬರ್ 4

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯ ಉದ್ಘಾಟನಾ ಸಮಾರಂಭವು ಅ. 4ಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ.

ಭರ್ಜರಿ ತಯಾರಿ

ಗ್ರ್ಯಾಂಡ್ ಒಪನಿಂಗ್ ಸೆರಮನಿಗೆ ನರೇಂದ್ರ ಮೋದಿ ಸ್ಟೇಡಿಯಂ ಭರ್ಜರಿ ತಯಾರಾಗಿದ್ದು, ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂದ ಶೋ ನಡೆಯಲಿದೆ.

ಸೆಲೆಬ್ರಿಟಿಗಳು

ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್​ನ ಸ್ಟಾರ್ ನಟ ರಣವೀರ್ ಸಿಂಗ್, ಗಾಯಕರಾದ ಶ್ರೇಯಾ ಘೋಷಾಲ್, ಅರಿಜಿತ್ ಸೇರಿದಂತೆ ಹಲವರನ್ನು ಬಿಸಿಸಿಐ ಆಹ್ವಾನಿಸಿದೆ.

ರಣವೀರ್ ಸಿಂಗ್

ಐಸಿಸಿಯ ವಿಶ್ವಕಪ್ ಗೀತೆಯ ಮುಖವಾಗಿದ್ದ ರಣವೀರ್ ಸಿಂಗ್ ಕೆಲವು ಬಾಲಿವುಡ್ ಮತ್ತು ಟಾಲಿವುಡ್ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ.

ಲೇಸರ್ ಶೋ

ಭಾರತೀಯ ಪರಂಪರೆಯನ್ನು ಪ್ರದರ್ಶಿಸುವ ಜೊತೆಗೆ ಲೇಸರ್ ಶೋ ಮತ್ತು ಪಟಾಕಿಗಳು ಸದ್ದು ಉದ್ಘಾಟನಾ ಸಮಾರಂಭದಲ್ಲಿ ಇರಲಿದೆ.

10 ತಂಡಗಳ ನಾಯಕರು

ಈ ಸಂದರ್ಭದಲ್ಲಿ ಎಲ್ಲಾ 10 ತಂಡಗಳ ನಾಯಕರು ಉಪಸ್ಥಿತರಿರುತ್ತಾರೆ. ಇಂಗ್ಲೆಂಡ್-ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯಕ್ಕೆ ಟಿಕೆಟ್ ಖರೀದಿಸಿದವರು ಇದರಲ್ಲಿ ಪಾಲ್ಗೊಳ್ಳಬಹುದು.

ಬಿಸಿಸಿಐ ಹಂಚಿಕೊಂಡ ಕೊಹ್ಲಿ-ಅಶ್ವಿನ್ ಫೋಟೋ ವೈರಲ್