01-10-2023

ಬಿಸಿಸಿಐ ಹಂಚಿಕೊಂಡ ಕೊಹ್ಲಿ-ಅಶ್ವಿನ್ ಫೋಟೋ ವೈರಲ್

ಫೋಟೋ ವೈರಲ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳಿರುವಾಗ ಬಿಸಿಸಿಐ ಫೋಟೋ ಒಂದು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

ಕೊಹ್ಲಿ-ಅಶ್ವಿನ್

ವಿರಾಟ್ ಕೊಹ್ಲಿ ಹಾಗೂ ರವಿಂದ್ರನ್ ಅಶ್ವಿನ್ ಅವರು ಈ ಹಿಂದೆ ಆಡಿದ ವಿಶ್ವಕಪ್ ಫೋಟೋ ಜೊತೆಗೆ ಈಗಿನ ಫೋಟೋ ಸೇರಿಸಿ ಬಿಸಿಸಿಐ ಶೇರ್ ಮಾಡಿದೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಅವರು 2011 ರಲ್ಲಿ ಭಾರತದಲ್ಲಿ ವಿಶ್ವಕಪ್ ನಡೆದಾಗ ತಂಡದಲ್ಲಿದ್ದರು. ಆಗಿನ ಫೋಟೋ ಮತ್ತು ಈಗಿನ ಫೋಟೋವನ್ನು ಅದ್ಭುತವಾಗಿ ಬಿಸಿಸಿಐ ಹಂಚಿಕೊಂಡಿದೆ.

ಆರ್. ಅಶ್ವಿನ್

2011ರ ವಿಶ್ವಕಪ್​ನಲ್ಲಿದ್ದ ಹಾಗೂ ಈಗ ಇರುವ ಮತ್ತೊಬ್ಬ ಆಟಗಾರ ಎಂದರೆ ಆರ್. ಅಶ್ವಿನ್. ಅವರ ಹಳೆಯ ಫೋಟೋ ಹಾಗೂ ಈಗಿನ ಫೋಟೋವನ್ನು ಬಿಸಿಸಿಐ ಶೇರ್ ಮಾಡಿದೆ.

ಅ. 5ಕ್ಕೆ ಆರಂಭ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 5ಕ್ಕೆ ಚಾಲನೆ ಸಿಗಲಿದ್ದು, ಅ, 8 ರಂದು ಭಾರತ ತಂಡ ಆಸೀಸ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ಅಭ್ಯಾಸ ಪಂದ್ಯ

ಸದ್ಯ ಎಲ್ಲ ತಂಡಗಳು ವಾರ್ಮ್-ಅಪ್ ಮ್ಯಾಚ್ ಆಡುತ್ತಿದೆ. ಭಾರತ ತಂಡ ಅ. 3 ರಂದು ನೆದರ್ಲೆಂಡ್ಸ್ ವಿರುದ್ಧ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಮೊದಲ ಪಂದ್ಯ ರದ್ದು

ಭಾರತ ಹಾಗೂ ಇಂಗ್ಲೆಂಡ್ ನಡುವೆ ಗುವಾಹಟಿಯಲ್ಲಿ ನಡೆಯಬೇಕಿದ್ದ ಮೊದಲ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದು ಮಾಡಲಾಯಿತು.

ಭಾರತಕ್ಕೆ ಬಂದ ತಕ್ಷಣ ದೇವಸ್ಥಾನಕ್ಕೆ ತೆರಳಿದ ಆಫ್ರಿಕಾ ಆಟಗಾರ