ಭಾರತಕ್ಕೆ ಬಂದ ತಕ್ಷಣ ದೇವಸ್ಥಾನಕ್ಕೆ ತೆರಳಿದ ಆಫ್ರಿಕಾ ಆಟಗಾರ

01 Oct 2023

Pic credit - Google

ಏಕದಿನ ವಿಶ್ವಕಪ್ 2023 ಭಾರತದಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ. ಇದಕ್ಕಾಗಿ ಎಲ್ಲಾ 9 ತಂಡಗಳು ಈಗಾಗಲೇ ಭಾರತಕ್ಕೆ ತಲುಪಿವೆ.

9 ತಂಡ ಆಗಮನ

ದಕ್ಷಿಣ ಆಫ್ರಿಕಾ ಕೂಡ ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಭಾರತವನ್ನು ತಲುಪಿದ್ದು, ಆಫ್ರಿಕಾದ ಸ್ಟಾರ್ ಆಟಗಾರ ವಿಜಯಕ್ಕಾಗಿ ಪ್ರಾರ್ಥಿಸಲು ದೇವಸ್ಥಾನಕ್ಕೆ ತೆರಳಿದ್ದಾರೆ.

ದೇವಾಲಯಕ್ಕೆ ಭೇಟಿ

ಆಫ್ರಿಕಾ ತಂಡದಲ್ಲಿರುವ ಏಕೈಕ ಹಿಂದೂ ಆಟಗಾರ ಕೇಶವ್ ಮಹಾರಾಜ್ ಭಾರತಕ್ಕೆ ತಲುಪಿದ ನಂತರ ತಿರುವನಂತಪುರಂನ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಕೇಶವ ಮಹಾರಾಜ ಭೇಟಿ

ಮಹಾರಾಜ್ ಅವರೊಂದಿಗೆ ಆಫ್ರಿಕಾ ತಂಡದ ತರಬೇತುದಾರರೂ ಹಾಜರಿದ್ದರು. ಇಬ್ಬರೂ ಕೇರಳದ ಸಾಂಪ್ರದಾಯಿಕ ಉಡುಗೆಯೊಂದಿಗೆ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ವಿಶ್ವಕಪ್‌ಗೂ ಮುನ್ನ ಪೂಜೆ

ಕೇಶವ ಮಹಾರಾಜ್ ಇನ್‌ಸ್ಟಾಗ್ರಾಮ್‌ನಲ್ಲಿ, ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ ದರ್ಶನ ಪಡೆಯುವುದು ಅದ್ಭುತ ಅನುಭವ. ಓಂ ನಮೋ ಭಗವತೇ ವಾಸುದೇವಾಯ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಮಂತ್ರ

ಮಹಾರಾಜ್ ಅವರು ಆಫ್ರಿಕಾ ತಂಡದೊಂದಿಗೆ ಭಾರತ ಪ್ರವಾಸಕ್ಕೆ ಬಂದಾಗ, ಯಾವುದಾದರೂ ದೇವಸ್ಥಾನಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ.

ಈ ಹಿಂದೆ ಕೂಡ ಭೇಟಿ

ಆಫ್ರಿಕಾ ತಂಡ ಪ್ರಸ್ತುತ ತಿರುವನಂತಪುರಂನಲ್ಲಿದ್ದು, ಅಫ್ಘಾನ್ ವಿರುದ್ಧದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮುಂದಿನ ಪಂದ್ಯ ಅ. 2 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ತಿರುವನಂತಪುರಂನಲ್ಲಿ ಹರಿಣಗಳ ಪಡೆ

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್ ಪಂದ್ಯ ಯಾವಾಗ?