01-10-2023

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಕ್ರಿಕೆಟ್ ಪಂದ್ಯ ಯಾವಾಗ?

ಏಷ್ಯನ್ ಗೇಮ್ಸ್

ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್ ನಡೆಯುತ್ತಿದ್ದು ಭಾರತ ಪುರುಷರ ಕ್ರಿಕೆಟ್ ತಂಡ ಭರ್ಜರಿ ಅಭ್ಯಾಸ ಶುರುಮಾಡಿಕೊಂಡಿದೆ.

ಕ್ವಾರ್ಟರ್ ಫೈನಲ್

ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ಪುರುಷರ ತಂಡವು ಕ್ವಾರ್ಟರ್-ಫೈನಲ್ ಹಂತದಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ಪಂದ್ಯ ಯಾವಾಗ?

ಭಾರತ ಕ್ರಿಕೆಟ್ ತಮ್ಮ ಏಷ್ಯನ್ ಗೇಮ್ಸ್​ನ ಮೊದಲ ಪಂದ್ಯವನ್ನು ಅಕ್ಟೋಬರ್ 3 ರಂದು ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದೆ.

ಎದುರಾಳಿ ಯಾರು?

ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಎದುರಾಳಿ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಗ್ರೂಪ್ ಹಂತದಿಂದ ತೇರ್ಗಡೆಗೊಂಡ ತಂಡದ ವಿರುದ್ಧ ಆಡಲಿದೆ.

ಎಷ್ಟು ಗಂಟೆಗೆ?

ಭಾರತದ ಕ್ರಿಕೆಟ್ ಪಂದ್ಯವು ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗಲಿದೆ. ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್ಸ್ 5 HD/SD ಮತ್ತು ಸೋನಿ ಟೆನ್ 3 HD/SD ನಲ್ಲಿ ವೀಕ್ಷಿಸಬಹುದು.

ಐದು ತಂಡ

ಭಾರತದ ಜೊತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ಹೀಗೆ ಐದು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿವೆ.

ಮಹಿಳೆಯರಿಗೆ ಚಿನ್ನ

ಭಾರತ ಮಹಿಳಾ ಕ್ರಿಕೆಟ್ ತಂಡದ ಏಷ್ಯನ್ ಗೇಮ್ಸ್​ನಲ್ಲಿ ಅದ್ಭೂತ ಪ್ರದರ್ಶನ ನೀಡಿ ಶ್ರೀಲಂಕಾ ವಿರುದ್ಧ ಫೈನಲ್​ನಲ್ಲಿ ಗೆದ್ದು ಚಿನ್ನ ಬಾಚಿಕೊಂಡಿತ್ತು.

ಭಾರತದ ಪ್ರ್ಯಾಕ್ಟೀಸ್ ಸೆಷನ್​ಗೆ ಬಂದಿದ್ದು ಕೇವಲ 4 ಮಂದಿ ಮಾತ್ರ