26-10-2023

ವಿಶ್ವಕಪ್ ನಡುವೆ ಟೀಮ್ ಇಂಡಿಯಾ ಕೋಚ್ ಬದಲಾವಣೆ

ವಿಶ್ವಕಪ್'ನಲ್ಲಿ ಭಾರತ

ವಿಶ್ವಕಪ್ 2023 ಟೂರ್ನಿಯಲ್ಲಿ ಇದುವರೆಗೆ ಟೀಮ್ ಆಡಿರುವ5 ಪಂದ್ಯಗಳಲ್ಲಿ ಎಲ್ಲವನ್ನೂ ಗೆದ್ದಿದೆ. ಪಾಯಿಂಟ್ ಟೇಬಲ್'ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.

ಮಹತ್ವದ ನಿರ್ಧಾರ

ಇದರ ನಡುವೆ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತ ಮಹಿಳಾ ತಂಡದ ನೂತನ ಕೋಚ್ ಅನ್ನು ಬಿಸಿಸಿಐ ನೇಮಕ ಮಾಡಿದೆ. ಈ ಬಗ್ಗೆ X ನಲ್ಲಿ ಪ್ರಕಟಿಸಿದೆ.

ಅಮೋಲ್ ಮುಜುಂದಾರ್

ಅನುಭವಿ ಕ್ರಿಕೆಟಿಗ ಅಮೋಲ್ ಮುಜುಂದಾರ್ ಅವರನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ.

ಮುಜುಂದಾರ್ ಹೇಳಿದ್ದೇನು?

ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದಕ್ಕೆ ನನಗೆ ಅತ್ಯಂತ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ. ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಅಮೋಲ್ ವೃತ್ತಿಜೀವನ

ಅಮೋಲ್ ಮುಜುಂದಾರ್ ಅವರು 171 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 49 ರ ಸರಾಸರಿಯಲ್ಲಿ 11,167 ರನ್ ಗಳಿಸಿದ್ದಾರೆ.

ದ್ರಾವಿಡ್ ಜೊತೆ ಆಡಿದ್ದಾರೆ

ಮುಜುಂದಾರ್ 1994 ರಲ್ಲಿ ಭಾರತ ಅಂಡರ್-19 ತಂಡದ ಉಪನಾಯಕರಾಗಿದ್ದರು. ಗಂಗೂಲಿ ಮತ್ತು ದ್ರಾವಿಡ್ ಅವರೊಂದಿಗೆ ಭಾರತ ಎ ಪರ ಆಡಿದ್ದರು.

ಮುಂಬೈ ಚಾಂಪಿಯನ್

2006-07 ರಲ್ಲಿ, ಅವರಿಗೆ ಮೊದಲ ಬಾರಿಗೆ ಮುಂಬೈನ ನಾಯಕತ್ವವನ್ನು ನೀಡಲಾಯಿತು. ದೇಶೀಯ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಆಗಿ ಮಾಡಿದರು.

ಅಸ್ಸಾಂ ಪರ ಆಡಿದ್ದರು

ಮುಜುಂದಾರ್ ಅಸ್ಸಾಂ ಪರ ರಣಜಿ ಟ್ರೋಫಿ ಆಡಿದ್ದರು. 2014 ರಲ್ಲಿ ನಿವೃತ್ತರಾಗುವ ಮೊದಲು ಅಸ್ಸಾಂ ಮತ್ತು ಆಂಧ್ರದಲ್ಲಿ ವೃತ್ತಿಪರ ಕ್ರಿಕೆಟಿಗರಾಗಿ ಕೊಡುಗೆ ಸಲ್ಲಿಸಿದ್ದರು.

ವಿಶ್ವದಾಖಲೆ ನಿರ್ಮಿಸಿದ ಗಿಲ್: ಏನಿದು ರೆಕಾರ್ಡ್ ನೋಡಿ