ಬೌಲಿಂಗ್​ನಲ್ಲಿ ಕೊಹ್ಲಿ ನಿರ್ಮಿಸಿರುವ ದಾಖಲೆಯನ್ನು ಇದುವರೆಗೆ ಯಾರೂ ಮುರಿದಿಲ್ಲ..!

17 July 2024

Pic credit: Google

ಪೃಥ್ವಿ ಶಂಕರ

Pic credit: Google

ವಿಶ್ವ ಕ್ರಿಕೆಟ್​ನ ರನ್ ಮಷಿನ್ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

Pic credit: Google

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲುವಿನ ಇನ್ನಿಂಗ್ಸ್ ಅಡಿದ್ದ ಕೊಹ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Pic credit: Google

ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್ ಆಗಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಆದರೆ ಇದುವರೆಗೂ ಯಾವುದೇ ಬೌಲರ್ ಹೆಸರಲ್ಲಿ ಇಲ್ಲದ ದಾಖಲೆ ಬೌಲರ್ ಆಗಿ ಅವರ ಹೆಸರಿನಲ್ಲಿದೆ.

Pic credit: Google

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇದುವರೆಗೆ ಒಟ್ಟು 9 ವಿಕೆಟ್ ಪಡೆದಿದ್ದಾರೆ. ಈ ಪೈಕಿ ಏಕದಿನದಲ್ಲಿ 5 ಹಾಗೂ ಟಿ20ಯಲ್ಲಿ 4 ವಿಕೆಟ್​ಗಳು ಸೇರಿವೆ.

Pic credit: Google

ಅದರಲ್ಲೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವುದೇ ಮಾನ್ಯವಾದ ಚೆಂಡನ್ನು ಎಸೆಯದೆ ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಕೊಹ್ಲಿ.

Pic credit: Google

2011 ರಲ್ಲಿ ನಡೆದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಸೆದ ಮೊದಲ ಎಸೆತದಲ್ಲೇ ಕೆವಿನ್ ಪೀಟರ್ಸನ್ ಸ್ಟಂಪ್ ಔಟ್ ಆಗಿದ್ದರು. ಆದರೆ ಈ ಚೆಂಡು ವೈಡ್ ಆಗಿತ್ತು.

Pic credit: Google

ಟಿ20 ಮಾತ್ರವಲ್ಲ, ಪುರುಷರ ಕ್ರಿಕೆಟ್‌ನಲ್ಲಿ ಮಾನ್ಯವಾದ ಚೆಂಡನ್ನು ಎಸೆಯದೆ ಯಾವುದೇ ಸ್ವರೂಪದಲ್ಲಿ ತಮ್ಮ ವೃತ್ತಿಜೀವನದ ಮೊದಲ ವಿಕೆಟ್ ಪಡೆದ ಏಕೈಕ ಬೌಲರ್ ವಿರಾಟ್.