ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಈ 10 ಕ್ರೀಡೆಗಳಲ್ಲಿ ಪದಕ ಖಚಿತ

15 July 2024

Pic credit - Google

ಪೃಥ್ವಿಶಂಕರ

Pic credit -  Google

ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು 2016ರ ರಿಯೊ ಒಲಿಂಪಿಕ್ಸ್‌ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದರು. ಹೀಗಾಗಿ ಈ ಬಾರಿಯೂ ಅವರು ಪದಕ ಗೆಲ್ಲುವ ನಿರೀಕ್ಷೆ ಎಲ್ಲರಲ್ಲೂ ಇದೆ.

ಪಿವಿ ಸಿಂಧು

Pic credit -  Google

ಭಾರತೀಯ ಮಹಿಳಾ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದನ್ನು ತಪ್ಪಿಸಿಕೊಂಡಿದ್ದರು. ಆದರೆ ಈ ಬಾರಿ ಅವರು ಈ ಕೊರತೆಯನ್ನು ನೀಗಿಸಬಹುದು.

ಅದಿತಿ ಅಶೋಕ್

Pic credit -  Google

ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಮಹಿಳಾ ಬಾಕ್ಸಿಂಗ್ ಆಟಗಾರ್ತಿ ನಿಖತ್ ಜರೀನ್ ಅವರು ಪದಕ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿದ್ದಾರೆ.

ನಿಖತ್ ಜರೀನ್

Pic credit -  Google

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ವಂಚಿತರಾಗಿದ್ದ ಮಹಿಳಾ ಕುಸ್ತಿ ಆಟಗಾರ್ತಿ ವಿನೇಶ್ ಫೋಗಟ್ ಈ ಬಾರಿ ಇತಿಹಾಸ ನಿರ್ಮಿಸಬಹುದು.

ವಿನೇಶ್ ಫೋಗಟ್

Pic credit -  Google

2020 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲೋವ್ಲಿನಾ ಬೊರ್ಹೇಗನ್, ಈ ಬಾರಿ ತಮ್ಮ ಪದಕದ ಬಣ್ಣವನ್ನು ಬದಲಾಯಿಸಬಹುದು.

ಲೋವ್ಲಿನಾ ಬೊರ್ಹೇಗನ್

Pic credit -  Google

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ವೇಟ್‌ಲಿಫ್ಟಿಂಗ್ ಆಟಗಾರ್ತಿ ಮೀರಾಬಾಯಿ ಚಾನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಪದಕ ಗೆಲ್ಲುವ ನಿರೀಕ್ಷೆ ಇದೆ.

ಮೀರಾಬಾಯಿ ಚಾನು

Pic credit -  Google

ಕಳೆದ ಬಾರಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಈ ವರ್ಷ ಇಲ್ಲಿಯವರೆಗೆ ಉತ್ತಮ ಫಾರ್ಮ್‌ನಲ್ಲಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಚಿನ್ನದ ಪದಕ ಗೆಲ್ಲಬಹುದು.

ನೀರಜ್ ಚೋಪ್ರಾ

Pic credit -  Google

ಬ್ಯಾಡ್ಮಿಂಟನ್‌ನಲ್ಲಿ ಸಾತ್ವಿಕ್ ಸಾಯಿರಾಜಾರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಈ ಬಾರಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಗಳಾಗಿದ್ದಾರೆ.

ಸಾತ್ವಿಕ್- ಚಿರಾಗ್ ಶೆಟ್ಟಿ

Pic credit -  Google

ಭಾರತ ಹಾಕಿ ತಂಡ ಇದುವರೆಗಿನ ಒಲಿಂಪಿಕ್ಸ್​ನಲ್ಲಿ ಸುವರ್ಣ ಇತಿಹಾಸ ಕಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಪ್ಯಾರಿಸ್ ಒಲಂಪಿಕ್ಸ್​ನಲ್ಲೂ ಪದಕ ಬೇಟೆ ನಿರೀಕ್ಷಿಸಲಾಗಿದೆ.

ಭಾರತ ಹಾಕಿ ತಂಡ