13-05-2024

ಕೊಹ್ಲಿ ಔಟಾದ ನಂತರ ಖುಷಿಯಲ್ಲಿ ಕುಣಿದ ಅನುಷ್ಕಾ ಶರ್ಮಾ

Author: Vinay Bhat

ಕೊಹ್ಲಿ ಫಾರ್ಮ್

ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ ರನ್ ಮಳೆ ಸುರಿಸುತ್ತಿದ್ದಾರೆ. ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೂಡ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.

Pic credit - Googlr

27 ರನ್​ಗೆ ಔಟ್

ಇನಿಂಗ್ಸ್ ಆರಂಭಿಸಿದ ತಕ್ಷಣ ಕೊಹ್ಲಿ 3 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದರೂ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ 13 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು.

Pic credit - Googlr

ಅನುಷ್ಕಾ ಶರ್ಮಾ

ಈ ಪಂದ್ಯ ವೀಕ್ಷಿಸಲು ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಕೂಡ ಆಗಮಿಸಿದ್ದರು. ಆದರೆ ಕೊಹ್ಲಿ ಅವರ ಮುಂದೆ ಸುದೀರ್ಘ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.

Pic credit - Googlr

ಅನುಷ್ಕಾ ಸಂಭ್ರಮ

ಆದರೆ, ಕೊಹ್ಲಿ ಔಟಾದ ನಂತರ ಅನುಷ್ಕಾ ಶರ್ಮಾ ತುಂಬಾ ಸಂತೋಷದಿಂದ ಕಾಣಿಸಿಕೊಂಡರು. ಜೋರಾಗಿ ಚಪ್ಪಾಳೆ ತಟ್ಟುತ್ತಾ ತಂಡಕ್ಕೆ ಪ್ರೋತ್ಸಾಹ ನೀಡಿದರು.

Pic credit - Googlr

ರಜತ್ ಪಟಿದಾರ್

ಕೊಹ್ಲಿ ವಿಕೆಟ್ ಪತನದ ನಂತರ ಕ್ರೀಸ್​ಗೆ ಬಂದ ರಜತ್ ಪಟಿದರ್ ಕೂಡ ಬೇಗನೆ ಔಟಾಗುವುದರಲ್ಲಿದ್ದರು. ಆದರೆ, ಅವರ ಕ್ಯಾಚ್ ಡ್ರಾಪ್ ಆಯಿತು. ಆಗ ಅನುಷ್ಕಾ ಖುಷಿಯಲ್ಲಿ ಸಂಭ್ರಮಿಸಿದರು.

Pic credit - Googlr

ಪಟಿದಾರ್ ಅರ್ಧಶತಕ

ಸಿಕ್ಕ ಜೀವದಾನವನ್ನು ಸರಿಯಾಗಿ ಉಪಯೋಗಿಸಿಕೊಂಡ ರಜತ್ ಪಟಿದಾರ್ 32 ಎಸೆತಗಳಲ್ಲಿ 52 ರನ್ ಸಿಡಿಸಿ ಈ ಋತುವಿನಲ್ಲಿ ಐದನೇ ಅರ್ಧಶತಕವನ್ನು ಗಳಿಸಿದರು.

Pic credit - Googlr

ಆರ್​ಸಿಬಿಗೆ ಜಯ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 47 ರನ್​ಗಳ ಜಯ ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ.

Pic credit - Googlr

ಆರ್​ಸಿಬಿ-ಚೆನ್ನೈ

ಇದೀಗ ಆರ್​ಸಿಬಿ ತನ್ನ ಕೊನೆಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೇ 18 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.

Pic credit - Googlr