ಭಾರತದ ಕೋಚ್ ಆದ್ರೆ ಕೋಟಿ ಕೋಟಿ ಹಣ: ರೇಸ್​ನಲ್ಲಿದ್ದಾರೆ ಈ 5 ದಿಗ್ಗಜರು

11-May-2024

Author: Vinay Bhat

ಹೊಸ ಮುಖ್ಯ ಕೋಚ್‌ಗಾಗಿ ಟೀಂ ಇಂಡಿಯಾ ಶೀಘ್ರದಲ್ಲೇ ಜಾಹೀರಾತು ಪ್ರಕಟಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.

ಹೊಸ ಕೋಚ್

Pic credit - Googlr

2024 ರ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ನಂತರ ಟೀಮ್ ಇಂಡಿಯಾಕ್ಕೆ ಹೊಸ ಕೋಚ್ ಆಯ್ಕೆ ಆಗಲಿದ್ದಾರೆ.

ದ್ರಾವಿಡ್ ಅವಧಿ ಮುಕ್ತಾಯ

Pic credit - Googlr

ಇದೀಗ ಟೀಮ್ ಇಂಡಿಯಾದ ನೂತನ ಕೋಚ್ ಯಾರು ಎಂಬ ಪ್ರಶ್ನೆ ಎದ್ದಿದೆ. ಮೂರು ವರ್ಷಗಳಿಗೆ ಬಿಸಿಸಿಐ ಕೋಟ್ಯಂತರ ರೂಪಾಯಿ ಯಾರಿಗೆ ನೀಡಲಿದೆ ಎಂಬುದು ನೋಡಬೇಕಿದೆ.

ಯಾರು ಕೋಚ್

Pic credit - Googlr

ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಮತ್ತು ಪ್ರಸ್ತುತ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಕೋಚ್ ಆಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ವಿವಿಎಸ್ ಲಕ್ಷ್ಮಣ್

Pic credit - Googlr

ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಜಸ್ಟಿನ್ ಲ್ಯಾಂಗರ್ ಕೂಡ ಟೀಮ್ ಇಂಡಿಯಾದ ಕೋಚ್ ಆಗಲು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಜಸ್ಟಿನ್ ಲ್ಯಾಂಗರ್

Pic credit - Googlr

ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಮೆಂಟರ್ ಆಗಿದ್ದ ಅಜಯ್ ಜಡೇಜಾ ಕೂಡ ಟೀಮ್ ಇಂಡಿಯಾದ ಕೋಚ್ ಆಗುವ ಸಾಧ್ಯತೆ ಹೆಚ್ಚಿದೆ.

ಅಜಯ್ ಜಡೇಜಾ

Pic credit - Googlr

ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಟಾಮ್ ಮೂಡಿ ಕೂಡ ಈ ರೇಸ್ ಪ್ರವೇಶಿಸಬಹುದು. ಶ್ರೀಲಂಕಾ ತಂಡದ ಕೋಚ್ ಆಗಿ ಮೂಡಿಗೆ ಅನುಭವವಿದೆ.

ಟಾಮ್ ಮೂಡಿ

Pic credit - Googlr

ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ಕೂಡ ಟೀಂ ಇಂಡಿಯಾದ ಕೋಚ್ ಆಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ.

ಆಶಿಶ್ ನೆಹ್ರಾ

Pic credit - Googlr