ಹೈದರಾಬಾದ್ ಜಿಮ್​ನಲ್ಲಿ ಬಾಬರ್: ಟ್ರೋಲ್ ಆದ ಪಾಕ್ ನಾಯಕ

02 Oct 2023

Pic credit - Google

ಪಾಕಿಸ್ತಾನ ಕ್ರಿಕೆಟ್ ತಂಡ ಏಳು ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದು, ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದೆ.

ಪಾಕ್ ವಿಶ್ವಕಪ್ ಮಿಷನ್

ಬಾಬರ್ ಅಝಮ್ ನಾಯಕತ್ವದ ಪಾಕಿಸ್ತಾನ ತಂಡ ಹೈದರಾಬಾದ್‌ನಲ್ಲಿ ತಂಗಿದ್ದು, ಅಲ್ಲಿ ಮೊದಲ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ.

ಹೈದರಾಬಾದ್‌ನಲ್ಲಿ ಪಾಕ್

ಬಾಬರ್ ಅಝಮ್ ಅವರು ಹೈದರಾಬಾದ್​ನಲ್ಲಿ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಜಿಮ್​ನಲ್ಲಿ ಬಾಬರ್

ಬಾಬರ್ ಅಝಮ್ ವಿಭಿನ್ನ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡುತ್ತಿರುವುದನ್ನು ಕಂಡು ಅಭಿಮಾನಿಗಳು ಅವರನ್ನು ಇಲ್ಲಿಯೂ ಟ್ರೋಲ್ ಮಾಡಿದ್ದಾರೆ.

ಟ್ರೋಲ್ ಆದ ಬಾಬರ್

ಫೋಟೋಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, 2 ಕೆಜಿ ತೂಕ ಎತ್ತುವುದರಿಂದ ಬಾಬರ್ ಭಾಯ್ ಏನೂ ಆಗುವುದಿಲ್ಲ ಎಂದು ಬರೆದಿದ್ದಾರೆ.

ಅಭಿಮಾನಿಗಳು ಹೇಳಿದ್ದೇನು?

ಬಾಬರ್ ಅಝಮ್ ಭಾರತಕ್ಕೆ ಬಂದ ನಂತರ ನಿರಂತರವಾಗಿ ಅನೇಕ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದು, ಹೈದರಾಬಾದ್​ನಲ್ಲಿ ಆನಂದಿಸುತ್ತಿದ್ದಾರೆ.

ಫೋಟೋಗಳ ಸುರಿಮಳೆ

ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದೆ. ಇದೀಗ ಮುಂದಿನ ಪಂದ್ಯವು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 3 ರಂದು ನಡೆಯಲಿದೆ.

ಅಭ್ಯಾಸ ಪಂದ್ಯ?

ICC World Cup: ಉದ್ಘಾಟನಾ ಸಮಾರಂಭಕ್ಕೆ ಮೋದಿ ಸ್ಟೇಡಿಯಂ ರೆಡಿ