16-10-2023

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ

ಪಾಕ್ ಇನ್ ಬೆಂಗಳೂರು

ಟೀಮ್ ಇಂಡಿಯಾ ವಿರುದ್ಧದ 3ನೇ ವಿಶ್ವಕಪ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯಕ್ಕಾಗಿ ಬೆಂಗಳೂರಿಗೆ ಆಗಮಿಸಿದೆ.

ಅದ್ಧೂರಿ ಸ್ವಾಗತ

ಅಹಮದಾಬಾದ್‌ನಿಂದ ಹಲವು ವರ್ಷಗಳ ಬಳಿಕ ಕರುನಾಡಿಗೆ ಕಾಲಿಟ್ಟಿರುವ ಬಾಬರ್ ಪಡೆಯನ್ನು ಆತ್ಮೀಯವಾಗಿ ಸ್ವಾಗತಿಸಲಾಗಿಯಿತು.

ಬಾಬರ್ ಹುಟ್ಟುಹಬ್ಬ

ಇದೇವೇಳೆ 29ನೇ ವಸಂತಕ್ಕೆ ಕಾಲಿಟ್ಟ ಪಾಕ್ ನಾಯಕ ಬಾಬರ್ ಆಝಂ ಅವರ ಜನ್ಮದಿನವನ್ನು ಇಡೀ ತಂಡ ಬೆಂಗಳೂರಿನಲ್ಲಿ ಆಚರಿಸಿದೆ.

2 ಗೆಲುವು-1 ಸೋಲು

ವಿಶ್ವಕಪ್ 2023 ರಲ್ಲಿ 3 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಎರಡು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಸಿಹಿ- ಕಹಿ ಅನುಭವ ಪಡೆದುಕೊಂಡಿದೆ.

ಆಸೀಸ್ ಎದುರಾಳಿ

ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಅಕ್ಟೋಬರ್ 20 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎದುರಿಸಲಿದೆ.

ಎಷ್ಟು ಗಂಟೆಗೆ?

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಣ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

ಮೊದಲ ಪಂದ್ಯ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ 2023 ಪಂದ್ಯ ಇದಾಗಿದ್ದು, ಹೌಸ್​ಫುಲ್ ಆಗುವ ನಿರೀಕ್ಷೆ ಇದೆ.

ಆಸೀಸ್-ಲಂಕಾ

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಇಂದು ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.

ರೋಹಿತ್ ಪತ್ನಿಗೆ ಹಗ್ ಕೊಟ್ಟ ವಿರಾಟ್ ಕೊಹ್ಲಿ