15-10-2023

ರೋಹಿತ್ ಪತ್ನಿಗೆ ಹಗ್ ಕೊಟ್ಟ ವಿರಾಟ್ ಕೊಹ್ಲಿ

ಭಾರತ-ಪಾಕ್

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟುಗಳ ಭರ್ಜರಿ ಜಯ ಸಾಧಿಸಿತು.

ರಿತಿಕಾ-ಅನುಷ್ಕಾ ಹಾಜರ್

ಭಾರತ-ಪಾಕ್ ಪಂದ್ಯ ವೀಕ್ಷಣೆಗೆ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇ ಮತ್ತು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಹಾಜರಿದ್ದರು.

ರಿತಿಕಾಗೆ ಕೊಹ್ಲಿ ಹಗ್

ಪಂದ್ಯ ಮುಗಿಸಿ ಎಲ್ಲ ಆಟಗಾರರು ಹೊಟೇಲ್​ಗೆ ತಲುಪಿದಾಗ ಅಲ್ಲಿ ಅನುಷ್ಕಾ ಮತ್ತು ರಿತಿಕಾ ಇದ್ದರು. ಈ ಸಂದರ್ಭ ರಿತಿಕಾರನ್ನು ಕಂಡು ಕೊಹ್ಲಿ ಹಗ್ ಕೊಟ್ಟಿದ್ದಾರೆ.

ರಿತಿಕಾ-ಅನುಷ್ಕಾ

ಭಾರತ -ಪಾಕ್ ಪಂದ್ಯ ನಡೆಯುತ್ತಿರುವ ವೇಳೆ ರಿತಿಕಾ ಸಜ್ದೇ ಮತ್ತು ಅನುಷ್ಕಾ ಶರ್ಮಾ ಜೊತೆಯಾಗಿ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದಾರೆ.

ರೋಹಿತ್ 86

ಪಾಕ್ ವಿರುದ್ಧ ಅಬ್ಬರಿಸಿದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಚಚ್ಚಿ 86 ರನ್ ಸಿಡಿಸಿದರು.

ರೋಹಿತ್ ದಾಖಲೆ

ಪಾಕ್ ವಿರುದ್ಧ ಅಬ್ಬರಿಸಿದ ರೋಹಿತ್ 6 ಸಿಕ್ಸರ್​ಗಳ ಮೂಲಕ ಏಕದಿನದಲ್ಲಿ 300 ಸಿಕ್ಸರ್‌ಗಳನ್ನು ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಮತ್ತು ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಗ್ರಸ್ಥಾನ

ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಭಾರತ ತಂಡ ಐಸಿಸಿ ಏಕದಿನ ವಿಶ್ವಕಪ್ 2023 ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ.

ಮುಂದಿನ ಪಂದ್ಯ

ವಿಶ್ವಕಪ್​ನಲ್ಲಿ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 19 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ.

ರೋಹಿತ್'ಗೆ ಸಿಕ್ಕಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ: ಮತ್ಯಾರಿಗೆ?