14-10-2023

ರೋಹಿತ್​ಗೆ ಸಿಕ್ಕಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ: ಮತ್ಯಾರಿಗೆ?

ಭಾರತಕ್ಕೆ ಜಯ

ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಅಮೋಘ ಜಯ ಸಾಧಿಸಿತು.

ರೋಹಿತ್ 86

ಸ್ಫೋಟಕ ಬ್ಯಾಟಿಂಗ್ ನಡೆಸಿದ ನಾಯಕ ರೋಹಿತ್ ಶರ್ಮಾ 63 ಎಸೆತಗಳಲ್ಲಿ 6 ಫೋರ್, 6 ಸಿಕ್ಸರ್ ಚಚ್ಚಿ 86 ರನ್ ಗಳಿಸಿದರು.

ರೋಹಿತ್'ಗಿಲ್ಲ ಪಂದ್ಯಶ್ರೇಷ್ಠ

ಆದರೆ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿಲ್ಲ.

ಜಸ್​ಪ್ರಿತ್ ಬುಮ್ರಾ

7 ಓವರ್ ಬೌಲಿಂಗ್ ಮಾಡಿ 1 ಮೇಡನ್ ಸಹಿತ ಕೇವಲ 19 ರನ್ ನೀಡಿ 2 ಪ್ರಮುಖ ವಿಕೆಟ್ ಕಿತ್ತ ಜಸ್​ಪ್ರಿತ್ ಬುಮ್ರಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಭಾರತ ದಾಖಲೆ

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಒಂದು ಸೋಲು ಕಾಣದ ಟೀಮ್ ಇಂಡಿಯಾ ಈ ಬಾರಿ ಕೂಡ ತನ್ನ ದಾಖಲೆಯನ್ನು ಕಾಪಾಡಿಕೊಂಡಿದೆ.

ಅಗ್ರಸ್ಥಾನ

ಈ ಗೆಲುವಿನ ಮೂಲಕ ಭಾರತ ತಂಡ ಐಸಿಸಿ ವಿಶ್ವಕಪ್ 2023 ಪಾಯಿಂಟ್ ಟೇಬಲ್​ನಲ್ಲಿ ಆರು ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ.

ಪಾಕ್​ಗೆ ಮುಖಭಂಗ

ಈ ಸೋಲಿನ ಮೂಲಕ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಕೇವಲ 191 ರನ್​ಗಳಿಗೆ ಆಲೌಟ್ ಆಗುವ ಹೀನಾಯ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿತು.

ರೋಹಿತ್ ದಾಖಲೆ

ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಸಿಕ್ಸರ್​​ಗಳ ಸುರಿಮಳೆ ಗೈದು ಏಕದಿನ ಕ್ರಿಕೆಟ್​ನಲ್ಲಿ 300+ ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ.

ರೋಹಿತ್ ಶರ್ಮಾ 300 ಸಿಕ್ಸ್: ಯಾರೂ ಮಾಡಿರದ ಸಾಧನೆ