04-November-2024

ಭಾರತದಲ್ಲಿ ಬಾಬರ್ ಮದುವೆ ಶಾಪಿಂಗ್: ಪಾಕ್ ಫ್ಯಾನ್ಸ್ ಕೆಂಡಾಮಂಡಲ

ನಾಲ್ಕು ಸೋಲು

2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಕಳಪೆ ಪ್ರದರ್ಶನ ನೀಡಿದೆ. ಆಡಿದ 7 ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಕಂಡಿದೆ.

ಬಾಬರ್ ಕೂಡ ಕಾರಣ?

ತಂಡದ ಈ ಸ್ಥಿತಿಗೆ ನಾಯಕ ಬಾಬರ್ ಅಝಂ ಕೂಡ ಕಾರಣರಾಗಿದ್ದಾರೆ ಎನ್ನಲಾಗುತ್ತಿದೆ. ತಂಡದ ಸಂಯೋಜನೆ ಹಾಗೂ ಕಳಪೆ ಫಾರ್ಮ್ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಕೆಂಗಣ್ಣಿಗೆ ಬಾಬರ್ ಗುರಿ

ಸತತ ಸೋಲುಗಳಿಂದ ಬಾಬರ್ ಈಗಾಗಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೆಲ್ಲದರ ನಡುವೆ ಇದೀಗ ಬಾಬರ್ ಕುರಿತು ಮತ್ತೊಂದು ಸುದ್ದು ಹೊರಬಿದ್ದಿದೆ.

ಮದುವೆಯ ಶಾಪಿಂಗ್

CNBC-ಆವಾಜ್‌ನ ವರದಿಯ ಪ್ರಕಾರ, ಪಾಕಿಸ್ತಾನ ತಂಡವು ವಿಶ್ವಕಪ್‌ನಲ್ಲಿ ಹೆಣಗಾಡುತ್ತಿರುವ ಮಧ್ಯೆ ಪಾಕಿಸ್ತಾನ ನಾಯಕ ತನ್ನ ಮದುವೆಯ ಶಾಪಿಂಗ್‌ನಲ್ಲಿ ನಿರತರಾಗಿದ್ದಾರಂತೆ.

ಶೇರ್ವಾನಿ ಖರೀದಿ

ವರದಿ ಪ್ರಕಾರ, ಬಾಬರ್ ವಿಶ್ವಕಪ್ ಬಳಿಕ ಮದುವೆಯಾಗಲಿದ್ದಾರೆ. ಹೀಗಾಗಿ ಕೋಲ್ಕತ್ತಾದಲ್ಲಿ ಇವರು ಲಕ್ಷ ಲಕ್ಷ ಬೆಲೆಬಾಳುವ ಶೇರ್ವಾನಿ ಖರೀದಿಸಿದ್ದಾರೆ.

7 ಲಕ್ಷ ರೂ.

ಈ ಶೇರ್ವಾನಿಯನ್ನು ಭಾರತದ ಖ್ಯಾತ ಡಿಸೈನರ್ ಸಬ್ಯಸಾಚಿ ವಿನ್ಯಾಸಗೊಳಿಸಿದ್ದು, ಇದಕ್ಕಾಗಿ ಬಾಬರ್ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗಿದೆ.

ಮದುವೆ ನಿಜವೇ?

ಬಾಬರ್ ಮದುವೆ ಬಗ್ಗೆ ಅವರ ಕುಟುಂಬದವರು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಿಗಿ ಈ ಸುದ್ದಿ ನಿಜವೇ ಅಥವಾ ಸುಳ್ಳೇ ಎಂಬುದು ತಿಳಿದುಬಂದಿಲ್ಲ.

ಇಮಾಮ್ ಮದುವೆ

ಕೆಲವು ತಿಂಗಳ ಹಿಂದೆ ಬಾಬರ್ ಮದುವೆಯ ಸುದ್ದಿ ಹರಿದಾಡಿತ್ತು. ಆಗ ಅವರ ತಂದೆ ಇದನ್ನು ತಿರಸ್ಕರಿಸಿದರು. ಇದೀಗ ಇಮಾಮ್ ಉಲ್ ಹಕ್ ವಿವಾಹಕ್ಕೆ ಶೆರ್ವಾನಿ ಖರೀದಿಸಿದ್ದಾರೆ ಎಂದುಕೂಡ ಹೇಳಲಾಗಿದೆ.

ಮುಂದಿನ ಪಂದ್ಯ ಹೀಗಾದರೆ ಸೆಮಿ ಫೈನಲ್​ನಲ್ಲಿ ಭಾರತ-ಪಾಕ್ ಮುಖಾಮುಖಿ