ಮುಂದಿನ ಪಂದ್ಯ ಹೀಗಾದರೆ ಸೆಮಿ ಫೈನಲ್​ನಲ್ಲಿ ಭಾರತ-ಪಾಕ್ ಮುಖಾಮುಖಿ

03 November 2023

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸಿದ ಭಾರತ ವಿಶ್ವಕಪ್'ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಭಾರತಕ್ಕೆ ಜಯ

ಭಾರತದ ಆಡಿರುವ 7 ಪಂದ್ಯಗಳಲ್ಲಿ 14 ಅಂಕ ಹೊಂದಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಇದುವರೆ ಒಂದೇ ಒಂದು ಸೋಲು ಕಂಡಿಲ್ಲ.

ಗೆಲುವಿನ ಓಟ

ಶ್ರೀಲಂಕಾ ಸೋಲಿನ ನಂತರ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದೇ ಎಂಬ ಪ್ರಶ್ನೆ ಹುಟ್ಟಿದೆ.

ಭಾರತ-ಪಾಕ್ ಸೆಮಿಫೈನಲ್

ಪಾಕಿಸ್ತಾನವು ಸದ್ಯ 7 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 6 ಅಂಕ ಹೊಂದಿ ಐದನೇ ಸ್ಥಾನದಲ್ಲಿದೆ. ಲಂಕಾದ ಸೋಲಿನ ಲಾಭವನ್ನು ಪಾಕಿಸ್ತಾನ ಪಡೆದುಕೊಂಡಿದೆ.

ಪಾಕಿಸ್ತಾನ 5ನೇ ಸ್ಥಾನ

ಪಾಕಿಸ್ತಾನ ನವೆಂಬರ್ 4 ರಂದು ನ್ಯೂಝಿಲೆಂಡ್ ವಿರುದ್ಧ ಆಡಲಿದೆ. -0.024 ರನ್ ರೇಟ್ ಹೊಂದಿರುವ ಪಾಕ್ ಕಿವೀಸ್ ವಿರುದ್ಧ 83 ರನ್‌ಗಳಿಂದ ಜಯಿಸಬೇಕಿದೆ.

ಪಾಕ್ ಹೀಗೆ ಮಾಡಬೇಕು

ಒಂದು ವೇಳೆ ಪಾಕ್ ಚೇಸಿಂಗ್ ಮಾಡಿದರೆ 35 ಓವರ್​ಗಳಲ್ಲಿ ಗುರಿ ಮುಟ್ಟಬೇಕು. ಇದು ಸಾಧ್ಯವಾಗದಿದ್ದರೆ ನ. 11 ರಂದು ಇಂಗ್ಲೆಂಡ್ ವಿರುದ್ಧ ದೊಡ್ಡ ಜಯ ಸಾಧಿಸಬೇಕು.

35 ಓವರ್ ಒಳಗೆ

ಅಷ್ಟೇ ಅಲ್ಲ, ಭಾರತ ಉಳಿದಿರುವ ಎರಡೂ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಬೇಕು. ಹೀಗಾದಾಗ ಭಾರತ-ಪಾಕ್ ಸೆಮಿಫೈನಲ್‌ನಲ್ಲಿ ಮುಖಾಮುಖಿ ಆಗುತ್ತದೆ.

ಭಾರತ ಅಗ್ರಸ್ಥಾನ

ನ. 5 ರಂದು ಆಫ್ರಿಕಾ ಮತ್ತು ನ. 12 ರಂದು ನೆದರ್ಲೆಂಡ್ಸ್ ವಿರುದ್ಧ ಭಾರತ ಆಡಲಿದೆ. 14 ಅಂಕ ಹೊಂದಿರುವ ಭಾರತ 2 ಗೆಲುವಿನೊಂದಿಗೆ 18 ಅಂಕ ತಲುಪುವ ಅವಕಾಶ ಹೊಂದಿದೆ.

18 ಅಂಕ ಗಳಿಸಬಹುದು

LIVE ಪಂದ್ಯದಲ್ಲಿ ಕ್ಯಾಪ್ಟನ್ ಮಾತು ಕೇಳದ ಜಡೇಜಾ: ಸಿಟ್ಟಾದ ರೋಹಿತ್