LIVE ಪಂದ್ಯದಲ್ಲಿ ಕ್ಯಾಪ್ಟನ್ ಮಾತು ಕೇಳದ ಜಡೇಜಾ: ಸಿಟ್ಟಾದ ರೋಹಿತ್

03-11-2023

LIVE ಪಂದ್ಯದಲ್ಲಿ ಕ್ಯಾಪ್ಟನ್ ಮಾತು ಕೇಳದ ಜಡೇಜಾ: ಸಿಟ್ಟಾದ ರೋಹಿತ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್'ಗಳ ದಾಖಲೆಯ ಜಯ ಸಾಧಿಸಿತು.

ಭಾರತಕ್ಕೆ ಜಯ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್'ಗಳ ದಾಖಲೆಯ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದ ಮಧ್ಯದಲ್ಲಿ ರವೀಂದ್ರ ಜಡೇಜಾ ಅವರ ಮೇಲೆ ಕೋಪಗೊಂಡರು.

ಕೋಪಗೊಂಡ ರೋಹಿತ್

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಂದ್ಯದ ಮಧ್ಯದಲ್ಲಿ ರವೀಂದ್ರ ಜಡೇಜಾ ಅವರ ಮೇಲೆ ಕೋಪಗೊಂಡರು.

ಜಡೇಜಾ ಕೊನೆಯ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದರು. ರೋಹಿತ್ ಡ್ರೆಸ್ಸಿಂಗ್ ರೂಮ್‌ನಿಂದ ಜಡೇಜಾಗೆ ಈ ಓವರ್‌ನ ಎಲ್ಲಾ 6 ಎಸೆತಗಳನ್ನು ಆಡಬೇಕೆಂದು ಸೂಚಿಸಿದರು.

ಜಡೇಜಾಗೆ ಸಂದೇಶ

ಜಡೇಜಾ ಕೊನೆಯ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದರು. ರೋಹಿತ್ ಡ್ರೆಸ್ಸಿಂಗ್ ರೂಮ್‌ನಿಂದ ಜಡೇಜಾಗೆ ಈ ಓವರ್‌ನ ಎಲ್ಲಾ 6 ಎಸೆತಗಳನ್ನು ಆಡಬೇಕೆಂದು ಸೂಚಿಸಿದರು.

ಮಾತು ತಪ್ಪಿದ ಜಡ್ಡು

ದುಷ್ಮಂತ ಚಮೀರಾ ಮೊದಲ ಎಸೆತದಲ್ಲಿ ಜಡೇಜಾ 2 ರನ್ ಗಳಿಸಿದರು, ಆದರೆ 2ನೇ ಎಸೆತದಲ್ಲಿ 1 ರನ್ ಪಡೆದರು. ಸ್ಟ್ರೈಕ್ ಶಮಿಗೆ ಹೋಯಿತು. ಆಗ ರೋಹಿತ್ ಡ್ರೆಸ್ಸಿಂಗ್ ರೂಮ್‌ನಿಂದ ಕೋಪಗೊಂಡರು.

ಶಮಿ ಔಟ್

3ನೇ ಎಸೆತದಲ್ಲಿ ಶಮಿ ರನ್ ಗಳಿಸಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗದೆ ಚೆಂಡು ವಿಕೆಟ್ ಕೀಪರ್ ಕೈಗೆ ಹೋಹಿ ರನೌಟ್​ಗೆ ಬಲಿಯಾದರು.

ಜಡೇಜಾ ಔಟ್

ಕೊನೆಯ ಓವರ್‌ನಲ್ಲಿ ಕೇವಲ 5 ರನ್‌ಗಳು ಬಂದವು. ಕೊನೆಯ ಎಸೆತದಲ್ಲಿ ಜಡೇಜಾ ಕೂಡ ರನೌಟ್ ಆದರು. 24 ಎಸೆತಗಳಲ್ಲಿ 35 ರನ್ ಗಳಿಸಿದರು.

ಶತಕ ವಂಚಿತರು

ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಗಿಲ್ ಶತಕ ವಂಚಿತರಾದರು. ಗಿಲ್ 92 ರನ್ ಗಳಿಸಿ ಔಟಾದರೆ, ಕೊಹ್ಲಿ 88 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಸೆಮೀಸ್​ಗೆ ಭಾರತ

302 ರನ್​ಗಳ ಅಮೋಘ ಜಯದೊಂದಿಗೆ ಟೀಮ್ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ಭಾರತ..!