ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದೆ.

02 November 2023

ಇದು ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಗೆಲುವಾಗಿದ್ದು, ಈ ಹಿಂದೆ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್ ತಂಡವನ್ನು 309 ರನ್‌ಗಳಿಂದ ಸೋಲಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಇನ್ನು ವಿಶ್ವಕಪ್ ಇತಿಹಾಸದಲ್ಲಿ ಭಾರತಕ್ಕೆ ಇದು ಅತಿ ದೊಡ್ಡ ಗೆಲುವಾಗಿದೆ. ಇನ್ನು ಇದಕ್ಕೂ ಮುನ್ನ ಭಾರತ ಸಾಧಿಸಿದ ಅತಿದೊಡ್ಡ ಗೆಲುವುಗಳನ್ನು ನೋಡುವುದಾದರೆ..

2007 ರಲ್ಲಿ ನಡೆದ ವಿಶ್ವಕಪ್​ನಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ ಬರ್ಮುಡಾ ತಂಡವನ್ನು 257 ರನ್‌ಗಳಿಂದ ಸೋಲಿಸಿತ್ತು.

2003ರ ವಿಶ್ವಕಪ್​ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಶ್ರೀಲಂಕಾ ತಂಡವನ್ನು 183 ರನ್‌ಗಳಿಂದ ಸೋಲಿಸಿತ್ತು.

2003 ರ ವಿಶ್ವಕಪ್​ನಲ್ಲಿ ಪೀಟರ್‌ಮರಿಟ್ಜ್‌ಬರ್ಗ್‌ನಲ್ಲಿ ನಮೀಬಿಯಾ ತಂಡವನ್ನು 181 ರನ್‌ಗಳಿಂದ ಸೋಲಿಸಿತ್ತು.

1999ರ ವಿಶ್ವಕಪ್​ನಲ್ಲಿ ಟೌಂಟನ್‌ನಲ್ಲಿ ಶ್ರೀಲಂಕಾ ತಂಡವನ್ನು 157 ರನ್‌ಗಳಿಂದ ಸೋಲಿಸಿತ್ತು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಏಕದಿನ ವಿಶ್ವಕಪ್‌ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದೆ.