ಬ್ಯಾಟಿಂಗ್​ ಪವರ್ ಪ್ಲೇಯಲ್ಲಿ ಕೇವಲ 14 ರನ್​ಗಳಿಗೆ ಲಂಕಾ ತಂಡದ 6 ವಿಕೆಟ್ ಉರುಳಿಸಿದ ಭಾರತದ ವೇಗಿಗಳು ಏಕದಿನ ವಿಶ್ವಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

02 November 2023

ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯವನ್ನು ರೋಹಿತ್ ಪಡೆ 302 ರನ್​ಗಳಿಂದ ಗೆದ್ದು ಬೀಗಿದೆ.

ತಂಡದ ಪರ ವಿರಾಟ್ ಕೊಹ್ಲಿ 88, ಶುಭ್​ಮನ್ ಗಿಲ್ 92 ಮತ್ತು ಶ್ರೇಯಸ್ ಅಯ್ಯರ್ 82 ರನ್​ಗಳ ಶತಕ ವಂಚಿತ ಇನ್ನಿಂಗ್ಸ್ ಆಡಿದರು.

ಭಾರತ ನೀಡಿದ 357 ರನ್​ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆ 55 ರನ್​ಗಳಿಗೆ ಆಲೌಟ್ ಆಯಿತು.

ಬೌಲಿಂಗ್​ನಲ್ಲಿ ಮಿಂಚಿದ ಮೊಹಮ್ಮದ್ ಶಮಿ ಐದು ವಿಕೆಟ್ ಪಡೆದರೆ, ಇವರಲ್ಲದೆ ಮೊಹಮ್ಮದ್ ಸಿರಾಜ್ ಮೂರು, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು.

ಬುಮ್ರಾ ವಿಶ್ವಕಪ್‌ ಇತಿಹಾಸದಲ್ಲಿ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು.

ಇದರೊಂದಿಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪವರ್‌ ಪ್ಲೇನಲ್ಲಿ ಆರು ವಿಕೆಟ್‌ಗಳನ್ನು ಪಡೆದ ಮೊದಲ ತಂಡ ಎಂಬ ದಾಖಲೆಯನ್ನು ಭಾರತ ನಿರ್ಮಿಸಿದೆ.

ಟೀಂ ಇಂಡಿಯಾಕ್ಕೂ ಮೊದಲು 2015 ರ ವಿಶ್ವಕಪ್​ನಲ್ಲಿ ಯುಎಇ ವಿರುದ್ಧ ವೆಸ್ಟ್ ಇಂಡೀಸ್ ಪವರ್​ ಪ್ಲೇನಲ್ಲಿ 5 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿತ್ತು.