ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದಾರೆ.

02 November 2023

ಮೊದಲ ಓವರ್​ನಲ್ಲೇ ನಾಯಕ ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಬ್ಯಾಟಿಂಗ್​ಗೆ ಇಳಿದ ಕೊಹ್ಲಿ ಈ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.

ಕೊಹ್ಲಿ ತಮ್ಮ ಇನ್ನಿಂಗ್ಸ್​ನಲ್ಲಿ 50 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ ಈ ಅರ್ಧಶತಕ ಸಿಡಿಸಿದರು.

ಏಕದಿನ  ಮಾದರಿಯಲ್ಲಿ ಇದು ಕೊಹ್ಲಿಯ 70ನೇ ಅರ್ಧಶತಕವಾಗಿದೆ.

ಈ ಅರ್ಧಶತಕದೊಂದಿಗೆ ಕೊಹ್ಲಿ ಒಂದು ಕ್ಯಾಲೆಂಡರ್ ವರ್ಷದಲ್ಲಿ 1000 ಏಕದಿನ ರನ್ ಪೂರೈಸಿದ್ದಾರೆ.

ವಿರಾಟ್ ತಮ್ಮ ವೃತ್ತಿ ಜೀವನದಲ್ಲಿ ಎಂಟನೇ ಬಾರಿ ಈ ಸಾಧನೆ ಮಾಡಿದ್ದಾರೆ.

ಈ ಹಿಂದೆ ಸಚಿನ್ ತೆಂಡೂಲ್ಕರ್ ಕ್ಯಾಲೆಂಡರ್ ವರ್ಷದಲ್ಲಿ 1000 ಕ್ಕೂ ಹೆಚ್ಚು ಏಕದಿನ ರನ್ ಗಳಿಸಿದ ದಾಖಲೆಯನ್ನು 7 ಬಾರಿ ಹೊಂದಿದ್ದರು. ಇದೀಗ ಆ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಇದಲ್ಲದೆ ಕೊಹ್ಲಿ ಈ ಪಂದ್ಯದಲ್ಲಿ ಗಿಲ್ ಅವರೊಂದಿಗೆ ಅಜೇಯ ಶತಕದ ಜೊತೆಯಾಟವನ್ನು ಕಟ್ಟಿದ್ದಾರೆ.