ಭಾರತಕ್ಕೆ ಬಂದು ಪಾಕಿಸ್ತಾನವನ್ನೇ ಮರೆತ ಬಾಬರ್: ಆಡಿದ ಮಾತು ಕೇಳಿ

05 Oct 2023

Pic credit - Google

ಅತಿಥಿಗಳನ್ನು ಸ್ವಾಗತಿಸುವಲ್ಲಿ ಭಾರತ ಯಾವಾಗಲೂ ಮುಂದಿರುತ್ತದೆ. ಅದೇರೀತಿ ವಿಶ್ವಕಪ್'ಗೆಂದು ಭಾರತಕ್ಕೆ ಬಂದ ಪಾಕಿಸ್ತಾನ ತಂಡವನ್ನು ಅದ್ಧೂರಿಯಾಗಿ ಸ್ವಾಗತಿಸಿದೆ.

ಅದ್ಧೂರಿ ಸ್ವಾಗತ

ಅಹ್ಮದಾಬಾದ್‌ನಲ್ಲಿ ನಡೆದ ಕ್ಯಾಪ್ಟನ್ ಮೀಟ್‌ನಲ್ಲಿ ಬಾಬರ್​ಗೆ ಭಾರತದಲ್ಲಿನ ಆತಿಥ್ಯದ ಬಗ್ಗೆ ಕೇಳಿದಾಗ, ಅವರು ಹೇಳಿದ್ದನ್ನು ನೋಡಿದರೆ, ಬಾಬರ್ ತಮ್ಮ ದೇಶವನ್ನು ಮರೆತಿದ್ದಾರೆಂದು ತೋರುತ್ತದೆ.

ಪಾಕಿಸ್ತಾನವನ್ನು ಮರೆತ ಬಾಬರ್

ಹೈದರಾಬಾದ್‌ನಲ್ಲಿ ನಮ್ಮನ್ನು ಸ್ವಾಗತಿಸಿದ ರೀತಿ ಕಂಡು ತುಂಬಾ ಸಂತೋಷವಾಯಿತು. ಇದು ನಮ್ಮ ನಿರೀಕ್ಷೆಗಳನ್ನು ಮೀರಿತ್ತು. ಇಡೀ ತಂಡ ಮೋಜು ಮಸ್ತಿ ಮಾಡಿದೆ ಎಂದು ಬಾಬರ್ ಹೇಳಿದ್ದಾರೆ.

ನಿರೀಕ್ಷೆಗೂ ಮೀರಿದ ಸ್ವಾಗತ

ನಾವು ಒಂದು ವಾರದಿಂದ ಹೈದರಾಬಾದ್‌ನಲ್ಲಿದ್ದೇವೆ ಮತ್ತು ನಾವು ಭಾರತದಲ್ಲಿ ವಾಸಿಸುತ್ತಿದ್ದೇವೆ ಎಂದು ನಮಗೆ ಅನಿಸುತ್ತಿಲ್ಲ ಎಂದು ಬಾಬರ್ ಹೇಳಿದ್ದಾರೆ.

ಭಾರತದ ಹಾಗೆ ಅನಿಸುತ್ತಿಲ್ಲ

ಒಂದು ಬೇಸರದ ವಿಷಯ ಎಂದರೆ, ನಮ್ಮ ದೇಶದ ಬೆಂಬಲಿಗರೂ ಭಾರತಕ್ಕೆ ಬಂದಿದ್ದರೆ ಚೆನ್ನಾಗಿತ್ತು ಎಂದು ಪಾಕಿಸ್ತಾನದ ನಾಯಕ ಹೇಳಿದ್ದಾರೆ.

ಬಾಬರನ ಆಶಯ

ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದ್ದು, ಪಾಕಿಸ್ತಾನವು ಅಕ್ಟೋಬರ್ 6 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಪಾಕ್ ಮೊದಲ ಪಂದ್ಯ

ಪಾಕಿಸ್ತಾನ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ಈ ಮ್ಯಾಚ್ ಹೈದರಾಬಾದ್‌ನಲ್ಲಿ ಏರ್ಪಡಿಸಲಾಗಿದೆ.

ಪಾಕ್-ನೆದರ್ಲೆಂಡ್ಸ್

ವಿಶ್ವಕಪ್ ಟೂರ್ನಿಗೆ ಇಂದು ಚಾಲನೆ: ಪಂದ್ಯ ಆರಂಭ ಎಷ್ಟು ಗಂಟೆಗೆ?