05-10-2023

ವಿಶ್ವಕಪ್ ಟೂರ್ನಿಗೆ ಇಂದು ಚಾಲನೆ: ಪಂದ್ಯ ಆರಂಭ ಎಷ್ಟು ಗಂಟೆಗೆ?

ವಿಶ್ವಕಪ್ 2023

ಅಭಿಯಾನಿಗಳು ಅನೇಕ ತಿಂಗಳುಗಳಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಗೆ ಇಂದು ಚಾಲನೆ ಸಿಗಲಿದೆ.

ಇಂಗ್ಲೆಂಡ್-ನ್ಯೂಝಿಲೆಂಡ್

ಇಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿ ಆಗಲಿದೆ.

ಎಷ್ಟು ಗಂಟೆಗೆ?

ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಗ್ಲೆಂಡ್-ನ್ಯೂಝಿಲೆಂಡ್ ನಡುವಣ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಸೇಡಿನ ಪಂದ್ಯ

ನ್ಯೂಝಿಲೆಂಡ್​ಗೆ ಇದೊಂದು ಸೇಡಿನ ಪಂದ್ಯ. ವಿಶ್ವಕಪ್ 2019 ರ ಫೈನಲ್‌ನಲ್ಲಿ ಉಭಯ ತಂಡಗಳು ಮುಖಾಮುಖಿ ಆಗಿದ್ದವು. ಇದರಲ್ಲಿ ಇಂಗ್ಲೆಂಡ್ ಜಯಿಸಿತ್ತು.

ಕೇನ್ ಅಲಭ್ಯ

ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಇವರು ಆರಂಭಿಕ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.

ಲ್ಯಾಥಮ್ ನಾಯಕ

ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ನ್ಯೂಝಿಲೆಂಡ್ ತಂಡವನ್ನು ನಾಯಕನಾಗಿ ಟಾಮ್ ಲ್ಯಾಥಮ್ ಮುನ್ನಡೆಸುತ್ತಿದ್ದಾರೆ.

ಬಲಿಷ್ಠ ಇಂಗ್ಲೆಂಡ್

ಆಂಗ್ಲರ ಪಡೆ ಬಲಿಷ್ಠವಾಗಿದೆ. ಬ್ರೂಕ್, ಸ್ಟೋಕ್ಸ್, ರೂಟ್ ಮತ್ತು ಬಟ್ಲರ್ ಅವರನ್ನೊಳಗೊಂಡ ಇಂಗ್ಲೆಂಡ್‌ ಆಕ್ರಮಣಕಾರಿ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ.

ಹೈದರಾಬಾದ್ ಜಿಮ್​'ನಲ್ಲಿ ಬಾಬರ್: ಟ್ರೋಲ್ ಆದ ಪಾಕ್ ನಾಯಕ