ಕ್ರಿಕೆಟಿಗರಾಗುವ ಮುನ್ನ ಕೂಲಿ ಕೆಲಸ ಮಾಡುತ್ತಿದ್ದರಂತೆ ಬಾಬರ್ ಅಜಮ್

02-February-2024

Author: Vinay Bhat

ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ಬಾಬರ್ ಅಜಮ್ ಈ ಯುಗದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ಬಾಬರ್ ಅಜಮ್

ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಬಾಬರ್ ತನ್ನ ಹೆಸರಿನಲ್ಲಿ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಆದರೆ, ಈ ಹಾದು ಸುಗಮವಾಗಿರಲಿಲ್ಲ.

ಮುಳ್ಳಿನ ಹಾದಿ

ಅಂತರಾಷ್ಟ್ರೀಯ ಕ್ರಿಕೆಟಿಗೆ ಬರುವ ಮುನ್ನ ಬಾಬರ್ ಲಾಹೋರ್'ನ ಗಡಾಫಿ ಸ್ಟೇಡಿಯಂನಲ್ಲಿ ಬಾಲ್ ಬಾಯ್ ಆಗಿದ್ದು ಗೊತ್ತೇ ಇದೆ. ಇದೀಗ ಮತ್ತೊಂದು ವಿಚಾರ ಬಹಿರಂಗವಾಗಿದೆ.

ಬಾಬರ್ ಮಾತು

ಬಾಬರ್ ಬಾಲ್ ಬಾಯ್ ಮಾತ್ರವಲ್ಲ, ಒಂದು ಕಾಲದಲ್ಲಿ ಕೂಲಿ ಕೆಲಸವನ್ನೂ ಮಾಡುತ್ತಿದ್ದರಂತೆ. ತನ್ನ ಕಷ್ಟದ ದಿನಗಳ ಬಗ್ಗೆ ಪಾಕ್ ಮಾಜಿ ನಾಯಕ ಮೆಲುಕು ಹಾಕಿದ್ದಾರೆ.

ಕೂಲಿ ಕೆಲಸ

ಬಾಬರ್ ಅವರು ಬೆಳಗ್ಗೆ ಕೂಲಿ ಕೆಲಸ ಮಾಡಿ ನಂತರ ನೆಟ್ ಅಭ್ಯಾಸ ಮಾಡುತ್ತಿದ್ದರು. ಇಂತಹ ಜೀವನ ನಿಮಗೆ ಪಾಠಗಳನ್ನು ಕಲಿಸುತ್ತವೆ ಎಂದು ಬಾಬರ್ ಹೇಳಿದರು.

ಪ್ರ್ಯಾಕ್ಟೀಸ್

ಬಾಬರ್ ಒಂದು ಕಾಲದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೂ, ಇಂದು ಬಾಬರ್ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿ ದಾಖಲೆ ಬರೆದಿದ್ದಾರೆ.

ದಾಖಲೆ

ಬಾಬರ್ ಅಜಮ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 13 ಸಾವಿರಕ್ಕೂ ಹೆಚ್ಚು ರನ್ ಮತ್ತು 31 ಶತಕಗಳನ್ನು ಹೊಂದಿದ್ದಾರೆ. ಜೊತೆಗೆ ನಂಬರ್ 1 ಬ್ಯಾಟರ್ ಆಗಿದ್ದಾರೆ.

ಬಾಬರ್ ಅಜಮ್

ಬಾಬರ್ ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ. ಮೂಲಗಳ ಪ್ರಕಾರ, ಅವರ ನಿವ್ವಳ ಮೌಲ್ಯ ಸುಮಾರು 50 ಕೋಟಿ ರೂ. ಅತಿ ಹೆಚ್ಚು ಸಂಭಾವನೆ ಪಡೆಯುವ ಪಾಕ್ ಕ್ರಿಕೆಟಿಗ.

ಕೋಟಿ ಆಸ್ತಿ