18-05-2024

ಹೀನಾಯ ಪ್ರದರ್ಶನ: ಮುಂಬೈ ತಂಡದಿಂದ ಈ 5 ಆಟಗಾರರಿಗೆ ಗೇಟ್ ಪಾಸ್?

Author: Vinay Bhat

ರೋಹಿತ್ ಶರ್ಮಾ

ಐಪಿಎಲ್ 2024 ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ತೆಗೆದುಹಾಕಲಾಯಿತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

Pic credit - Googlr

ಎಲ್ಲವೂ ಸರಿಯಿಲ್ಲ

ಐಪಿಎಲ್ ಶುರುವಾದ ಬಳಿಕ ಅನೇಕ ಬಾರಿ ಮುಂಬೈ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ವರದಿಯಾಗಿದೆ. ಆದ್ದರಿಂದ ರೋಹಿತ್ ಇತರೆ ಫ್ರಾಂಚೈಸಿಗೆ ಹೋಗುವ ಸಾಧ್ಯತೆ ಇದೆ.

Pic credit - Googlr

ರೋಹಿತ್ ಶರ್ಮಾ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಮುಂದಿನ ಸೀಸನ್​ನಲ್ಲಿ ಇವರು ಬೇರೆ ಪ್ರಾಂಚೈಸಿ ಪರ ಆಡಬಹುದು.

Pic credit - Googlr

ಅರ್ಜುನ್ ತೆಂಡೂಲ್ಕರ್

2021 ರಲ್ಲಿ ಮುಂಬೈ ಫ್ರಾಂಚೈಸಿ ಸೇರಿದ ಅರ್ಜುನ್ ತೆಂಡೂಲ್ಕರ್ ಈವರೆಗೆ ಕೇವಲ 4 ಪಂದ್ಯಗಳನ್ನು ಆಡಿದ್ದಾರಷ್ಟೆ. ಹೀಗಾಗಿ ಇವರನ್ನು ಬಿಡುಗಡೆ ಮಾಡಬಹುದು.

Pic credit - Googlr

ಮೊಹಮ್ಮದ್ ನಬಿ

ನಬಿ ಅವರ ವಯಸ್ಸು ಮತ್ತು ಐಪಿಎಲ್ 2024 ರಲ್ಲಿ ಪ್ರಭಾವ ಬೀರದ ಕಾರಣ ಐಪಿಎಲ್ 2024 ರ ನಂತರ ಮುಂಬೈ ಇಂಡಿಯನ್ಸ್ ಅವರನ್ನು ಬಿಡುಗಡೆ ಮಾಡಬಹುದು.

Pic credit - Googlr

ಮೊಹಮ್ಮದ್ ನಬಿ

ಮೊಹಮ್ಮದ್ ನಬಿಗೆ ಐಪಿಎಲ್ 2024 ರಲ್ಲಿ ಅನೇಕ ಅವಕಾಶ ಸಿಗಲಿಲ್ಲ. ಸಿಕ್ಕ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಲಿಲ್ಲ. 35 ರನ್ ಮತ್ತು 2 ವಿಕೆಟ್ ಪಡೆದರಷ್ಟೆ.

Pic credit - Googlr

ಪಿಯೂಷ್ ಚಾವ್ಲಾ

ಚಾವ್ಲಾ ಅವರನ್ನು ಐಪಿಎಲ್ 2024 ರ ನಂತರ ರಿಲೀಸ್ ಮಾಡಬಹುದು. ಇವರಿಗೆ ಈಗಾಗಲೇ ವಯಸ್ಸಾಗಿದ್ದು, ಕಿರಿಯ ಸ್ಪಿನ್ನರ್ ಅನ್ನು ಕರೆತರಬಹುದು.

Pic credit - Googlr

ಟಿಮ್ ಡೇವಿಡ್

ಆಸ್ಟ್ರೇಲಿಯಾದ ಟಿಮ್ ಡೇವಿಡ್ ಅವರು ಕಳಪೆ ಪ್ರದರ್ಶನ ನೀಡುತ್ತಿರುವ ಕಾರಣ ಐಪಿಎಲ್ 2024 ರ ನಂತರ ಬಿಡುಗಡೆಯಾಗಬಹುದು. ಇವರು 38 ಪಂದ್ಯಗಳಲ್ಲಿ 659 ರನ್ ಸಿಡಿಸಿದ್ದಾರೆ.

Pic credit - Googlr