T20 ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಭಾರತೀಯರು ಇವರೇ ನೋಡಿ

17-May-2024

Author: Vinay Bhat

ಕೆಎಲ್ ರಾಹುಲ್ ಭಾರತಕ್ಕಾಗಿ 2021 ಮತ್ತು 22 ರಲ್ಲಿ ಎರಡು T20I ವಿಶ್ವಕಪ್‌ಗಳನ್ನು ಆಡಿದ್ದಾರೆ. ಒಟ್ಟು 11 ಪಂದ್ಯಗಳನ್ನು ಆಡಿದ್ದು, 5 ಅರ್ಧಶತಕಗಳೊಂದಿಗೆ 322 ರನ್ ಗಳಿಸಿದ್ದಾರೆ.

ಕೆಎಲ್ ರಾಹುಲ್

Pic credit - Googlr

ಆದರೆ, ಈ ಬಾರಿಯ ವಿಶ್ವಕಪ್​ಗೆ ರಾಹುಲ್ ಆಯ್ಕೆ ಆಗಲಿಲ್ಲ. ಭಾರತ ಪರ ಇವರು ಎರಡು ಟಿ20 ವಿಶ್ವಕಪ್‌ ಆವೃತ್ತಿಯಲ್ಲಿ ಒಟ್ಟು 15 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಕೆಎಲ್ ರಾಹುಲ್

Pic credit - Googlr

2007 ರ T20 ವಿಶ್ವಕಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದ ಎಂಎಸ್ ಧೋನಿ, ಚೊಚ್ಚಲ ಸೀಸನ್​ನಲ್ಲೇ ಪ್ರಶಸ್ತಿ ತಂದುಕೊಟ್ಟರು.

ಎಂಎಸ್ ಧೋನಿ

Pic credit - Googlr

ಧೋನಿ 2007 ರಿಂದ 2016 ರವರೆಗೆ ಟಿ20 ವಿಶ್ವಕಪ್‌ನ ಭಾಗವಾಗಿದ್ದರು, ಅಲ್ಲಿ ಅವರು 33 ಪಂದ್ಯಗಳಲ್ಲಿ 529 ರನ್ ಗಳಿಸಿ 16 ಸಿಕ್ಸರ್ ಸಿಡಿಸಿದ್ದರು.

ಎಂಎಸ್ ಧೋನಿ

Pic credit - Googlr

ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ. ಅವರು 2012 ರಲ್ಲಿ ತಮ್ಮ ಮೊದಲ T20 ವಿಶ್ವಕಪ್ ಆಡಿದರು. 2024 ರ ಟಿ20 ವಿಶ್ವಕಪ್‌ಗೆ ತಂಡದ ಭಾಗವಾಗಿದ್ದಾರೆ.

ವಿರಾಟ್ ಕೊಹ್ಲಿ

Pic credit - Googlr

ಕಳೆದ ವಿಶ್ವಕಪ್​ನಲ್ಲಿ ಕೂಡ ಅಮೋಘ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ, ಈವರೆಗೆ ಟಿ20 ವಿಶ್ವಕಪ್‌ನಲ್ಲಿ ಭಾರತ ಪರ 27 ಪಂದ್ಯಗಳಲ್ಲಿ 28 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ವಿರಾಟ್ ಕೊಹ್ಲಿ

Pic credit - Googlr

ಯುವರಾಜ್ ಸಿಂಗ್ ಅವರನ್ನು ಸಿಕ್ಸರ್ ರಾಜ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿರುವುದು.

ಯುವರಾಜ್ ಸಿಂಗ್

Pic credit - Googlr

ಯುವರಾಜ್ ಸಿಂಗ್ ತಮ್ಮ ಕೆರಿಯರ್​ನಲ್ಲಿ ಒಟ್ಟು 31 ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 33 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಯುವರಾಜ್ ಸಿಂಗ್

Pic credit - Googlr

ಭಾರತದ ನಾಯಕ ರೋಹಿತ್ ಶರ್ಮಾ ಈವರೆಗೆ ನಡೆದಿರುವ ಎಲ್ಲಾ ಟಿ20 ವಿಶ್ವಕಪ್‌ಗಳಲ್ಲಿ ಆಡುತ್ತಿರುವ ದೇಶದ ಏಕೈಕ ಕ್ರಿಕೆಟಿಗ.

ರೋಹಿತ್ ಶರ್ಮಾ

Pic credit - Googlr

ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರು T20 ವಿಶ್ವಕಪ್‌ಗಳಲ್ಲಿ ಭಾರತಕ್ಕಾಗಿ ಅತಿ 35 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ರೋಹಿತ್ ಶರ್ಮಾ

Pic credit - Googlr