ಭಾರತ ತಂಡದಲ್ಲಿ ಯಾರಿಗೆಲ್ಲ ಸ್ಯಾಲರಿ ಹೈಕ್ ಆಗಿದೆ?: ಇಲ್ಲಿದೆ ಲಿಸ್ಟ್
Author: Vinay Bhat
ಕೇಂದ್ರ ಒಪ್ಪಂದ
ಬಿಸಿಸಿಐ 2023-24ರ ಸೀಸನ್‌ಗಳ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದೆ. ಇದರಲ್ಲಿ ನಾಲ್ಕು ಆಟಗಾರರು ಸಂಬಳವನ್ನು ಹೆಚ್ಚಳ ಮಾಡಲಾಗಿದೆ. ಅವರು ಯಾರು ನೋಡಿ.
ಕೆಎಲ್ ರಾಹುಲ್
2022-23 ರಲ್ಲಿ ಇಂಜುರಿ ಮತ್ತು ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಕೆಎಲ್ ರಾಹುಲ್ ಅವರನ್ನು ಗ್ರೇಡ್ B ಗೆ ಇಳಿಸಲಾಗಿತ್ತು. ಇದೀಗ ರಾಹುಲ್ 2023-24 ರಲ್ಲಿ ಗ್ರೇಡ್ A ಗೆ ಮರಳಿದ್ದಾರೆ.
ಕೆಎಲ್ ರಾಹುಲ್
ಕೆಎಲ್ ರಾಹುಲ್ 2022-23ರಲ್ಲಿ ಬಿಸಿಸಿಐಯಿಂದ 3 ಕೋಟಿ ಸ್ಯಾಲರಿ ಪಡೆಯುತ್ತಿದ್ದರೆ, ಇತ್ತೀಚಿನ ಒಪ್ಪಂದಗಳಲ್ಲಿ 5 ಕೋಟಿಗೆ ಹೆಚ್ಚಳ ಮಾಡಲಾಗಿದೆ.
ಶುಭ್ಮನ್ ಗಿಲ್
ಇತ್ತೀಚಿನ ಬಿಸಿಸಿಐ ಕೇಂದ್ರ ಒಪ್ಪಂದಗಳಲ್ಲಿ ಶುಭ್ಮನ್ ಗಿಲ್ ಅವರನ್ನು ಗ್ರೇಡ್ B ಯಿಂದ ಗ್ರೇಡ್ A ಗೆ ತೇರ್ಗಡೆ ಮಾಡಲಾಗಿದೆ.ಈ ಮೂಲಕ ಅವರು ಭಾರಿ ವೇತನ ಪಡೆಯಲಿದ್ದಾರೆ.
ಶುಭ್ಮನ್ ಗಿಲ್
ಶುಭ್ಮನ್ ಗಿಲ್ ಕಳೆದ ವರ್ಷ ಬಿಸಿಸಿಐ ಕೇಂದ್ರ ಒಪ್ಪಂದದಿಂದ 3 ಕೋಟಿ ರೂ. ಪಡೆಯುತ್ತಿದ್ದರು. ಆದರೆ ಈಗ ವೇತನ ಹೆಚ್ಚಳವಾದ ಕಾರಣ ಇವರ ಸ್ಯಾಲರಿ ರೂ. 5 ಕೋಟಿ ಆಗಿದೆ.
ಕುಲ್ದೀಪ್ ಯಾದವ್
ಕುಲ್ದೀಪ್ ಯಾದವ್ ಅವರು 2023 ರಲ್ಲಿ ಅಮೋಘ ಪ್ರದರ್ಶನ ತೋರಿದರು. ಇದು ಅವರ ವೃತ್ತಿಜೀವನದ ಟರ್ನಿಂಗ್ ಪಾಯಿಂಟ್ ಆಯಿತು. ಇದೀಗ ಕುಲ್ದೀಪ್ಗೆ ಸಹಾಯ ಮಾಡಿದೆ.
ಕುಲ್ದೀಪ್ ಯಾದವ್
ಯಾದವ್ ಗ್ರೇಡ್ ಸಿ ಮತ್ತು ಗ್ರೇಡ್ ಬಿ ಯಿಂದ ಭಾರಿ ವೇತನ ಹೆಚ್ಚಳವನ್ನು ಪಡೆದಿದ್ದಾರೆ. ಅವರು 2023-24ರಲ್ಲಿ 3 ಕೋಟಿ ರೂ. ಪಡೆಯಲಿದ್ದಾರೆ.
ಮೊಹಮ್ಮದ್ ಸಿರಾಜ್
ಸಿರಾಜ್ ಅವರಿಗೆ ಬಿಸಿಸಿಐ ವೇತನ ಹೆಚ್ಚಳ ಮಾಡಿದ್ದು, ಎ ಗ್ರೇಡ್‌ಗೆ ಸೇರ್ಪಡೆಯಾದ ನಂತರ 2023-24 ರಿಂದ 5 ಕೋಟಿ ರೂ. ಸಂಬಳವಾಗಿ ಪಡೆಯಲಿದ್ದಾರೆ.
ಮೊಹಮ್ಮದ್ ಸಿರಾಜ್
ಸಿರಾಜ್ ಕಳೆದ ಒಂದು ವರ್ಷದಲ್ಲಿ ಎಲ್ಲಾ ಮೂರು ಮಾದರಿಗಳಲ್ಲಿ ಭಾರತದ ಬೌಲಿಂಗ್ ಘಟಕದ ಆಧಾರಸ್ತಂಭವಾಗಿದ್ದಾರೆ. ಸಿರಾಜ್ ಈ ಹಿಂದೆ ಬಿ ಗ್ರೇಡ್ ನಲ್ಲಿದ್ದು ರೂ. 3 ಕೋಟಿ ಪಡೆಯುತ್ತಿದ್ದರು.