ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಹೊರಬಿದ್ದ 7 ಆಟಗಾರರು ಇವರೇ ನೋಡಿ
29 February 2024
Author: Vinay Bhat
ಬಿಸಿಸಿಐ ಒಪ್ಪಂದವನ್ನು ಕಳೆದುಕೊಂಡ ಏಳು ಆಟಗಾರರಲ್ಲಿ ಇಶಾನ್ ಕಿಶನ್ ಸೇರಿದ್ದಾರೆ. ಆಫ್ರಿಕಾ ಪ್ರವಾಸದ ನಂತರ ಎಡಗೈ ಬ್ಯಾಟ್ಸ್‌ಮನ್ ಆಟದಿಂದ ಹೊರಗುಳಿದಿದ್ದಾರೆ.
ಇಶಾನ್ ಕಿಶನ್
ಬಿಸಿಸಿಐ ಆದೇಶದ ಹೊರತಾಗಿಯೂ ರಣಜಿ ಪಂದ್ಯದಿಂದ ಹೊರಗುಳಿದ ಎರಡನೇ ಆಟಗಾರ ಶ್ರೇಯಸ್ ಅಯ್ಯರ್. ಕಳೆದ ವರ್ಷ ಇವರು ಬಿ ಗ್ರೇಡ್‌ನಲ್ಲಿದ್ದರು.
ಶ್ರೇಯಸ್ ಅಯ್ಯರ್
ಧವನ್ 2023 ರಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡು ಕಳೆದ ವರ್ಷ ಯಾವುದೇ ಪಂದ್ಯವನ್ನು ಆಡಿರಲಿಲ್ಲ. ಧವನ್ ಈಗ ಕೇವಲ ಐಪಿಎಲ್ ಆಡುತ್ತಾರೆ.
ಶಿಖರ್ ಧವನ್
ಚೇತೇಶ್ವರ ಪೂಜಾರ ಅವರನ್ನು ಆಯ್ಕೆಗಾರರು ಯಾವುದೇ ಟೆಸ್ಟ್ ಸರಣಿಗೆ ಆಯ್ಕೆ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.
ಚೇತೇಶ್ವರ ಪೂಜಾರ
ಹೂಡಾ ಅವರು ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಬಿಸಿಸಿಐ ಅವರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿದೆ.
ದೀಪಕ್ ಹೂಡಾ
ಯುಜ್ವೇಂದ್ರ ಚಹಲ್ ಟೀಮ್ ಇಂಡಿಯಾ ಪರ ಆಡದೆ ಕೆಲ ಸಮಯ ಕಳೆದಿದೆ. ಆಯ್ಕೆಗಾರರು ಔಟ್ ಆಫ್ ಫೇವರ್ ಸ್ಪಿನ್ನರ್‌ಗೆ ಗುತ್ತಿಗೆ ನೀಡದಿರಲು ನಿರ್ಧರಿಸಿದ್ದಾರೆ.
ಯುಜ್ವೇಂದ್ರ ಚಹಲ್
2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ನಂತರ ಉಮೇಶ್ ಯಾದವ್ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು ಮತ್ತು ಅಂದಿನಿಂದ ಅವರನ್ನು ಮರಳಿ ಕರೆಸಿಕೊಂಡಿಲ್ಲ.
ಉಮೇಶ್ ಯಾದವ್
ಬಡ ಹುಡುಗ ಧ್ರುವ್ ಜುರೆಲ್ಗೆ ಬಂಪರ್: 23 ಲಕ್ಷದ ಕಾರು ಗಿಫ್ಟ್