ಬಡ ಹುಡುಗ ಧ್ರುವ್ ಜುರೆಲ್​ಗೆ ಬಂಪರ್: 23 ಲಕ್ಷದ ಕಾರು ಗಿಫ್ಟ್

27-February-2024

Author: Vinay Bhat

ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ. ಈ ಪಂದ್ಯದಲ್ಲಿ ಮಿಂಚಿದ್ದು ಟೀಂ ಇಂಡಿಯಾದ ಧ್ರುವ್ ಜುರೆಲ್.

ರಾಂಚಿಯ ಹೀರೋ

ತನ್ನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಧ್ರುವ್, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು. ಜೊತೆಗೆ ಬಂಪರ್ ಗಿಫ್ಟ್ ಕೂಡ ಸಿಕ್ಕಿದೆ.

ಪಂದ್ಯಶ್ರೇಷ್ಠ

ಈ ಪಂದ್ಯದ ನಂತರ ಜುರೆಲ್ ಹೀರೋ ಆಗಿದ್ದು, ಇದೀಗ ದುಬಾರಿ ಕಾರನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ. ಎಂಜಿ ಕಂಪನಿಯು ತನ್ನ ಕಾರು ಎಂಜಿ ಹೆಕ್ಟರ್ ಅನ್ನು ಜುರೆಲ್‌ಗೆ ನೀಡಲು ನಿರ್ಧರಿಸಿದೆ.

ದುಬಾರಿ ಕಾರು

MG ಕಾರ್ ಕಂಪನಿಯು ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ ಧ್ರುವ್​ಗೆ ಕಾರು ಗಿಫ್ಟ್ ಆಗಿ ನೀಡುವ ಬಗ್ಗೆ ಪೋಸ್ಟ್ ಮಾಡಿದೆ. ಇದು ಜುರೆಲ್​ಗೆ ದೊಡ್ಡ ಉಡುಗೊರೆ ಎನ್ನಬಹುದು.

X ನಲ್ಲಿ ಪೋಸ್ಟ್

ರಾಜ್‌ಕೋಟ್ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಬಳಿಕ ಆನಂದ್ ಮಹೀಂದ್ರಾ ಥಾರ್ ಉಡುಗೊರೆಯಾಗಿ ನೀಡಿದ್ದರು.

ಸರ್ಫರಾಜ್​ಗೆ ಥಾರ್

ಥಾರ್​ನ ಟಾಪ್ ಮಾಡೆಲ್ ಬೆಲೆ ಅಂದಾಜು 14 ಲಕ್ಷ ರೂ. ಆಗಿದೆ. ಹಾಗೆಯೆ ಎಂಜಿ ಹೆಕ್ಟರ್‌ನ ಟಾಪ್ ಮಾಡೆಲ್‌ನ ಬೆಲೆ ಸುಮಾರು 23 ಲಕ್ಷ ರೂ. ಆಗಿದೆ.

23 ಲಕ್ಷ ರೂ.

ರಾಂಚಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಜುರೆಲ್ 90 ರನ್‌ಗಳ ಇನ್ನಿಂಗ್ಸ್ ಆಡಿ ತಂಡಕ್ಕೆ ಆಸರೆಯಾಗಿದ್ದರು. ಬಳಿಕ ಎರಡನೇ ಇನ್ನಿಂಗ್ಸ್​ನಲ್ಲೂ ಆಧಾರವಾಗಿ ನಿಂತಿದ್ದರು.

ತಂಡಕ್ಕೆ ಆಸರೆ

ಜುರೆಲ್ ತನ್ನ 2ನೇ ಇನ್ನಿಂಗ್ಸ್​ನಲ್ಲಿ ಅದ್ಭುತ ಬ್ಯಾಟ್ ಮಾಡಿದರು.ಅಜೇಯ 39 ರನ್ ಗಳಿಸಿ ತಂಡದ ಗೆಲುವಿಗೆ ಮುಖ್ಯ ಕಾರಣರಾದರು. ಇದೀಗ ಕೊನೆಯ ಟೆಸ್ಟ್ ಮೇಲೆ ನಿರೀಕ್ಷೆಯಿದೆ.

ಅಜೇಯ 39 ರನ್