28-01-2024

ಈ ಇಂಗ್ಲೆಂಡ್ ಕ್ರಿಕೆಟಿಗನಿಗೆ ಬಿಸಿಸಿಐ ನೀಡುತ್ತಿದೆ ಕೋಟಿ ಕೋಟಿ ರೂ.

Author: Vinay Bhat

ಭಾರತ-ಇಂಗ್ಲೆಂಡ್

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಸದ್ಯ ಹೈದರಾಬಾದ್ ಮೊದಲ ಟೆಸ್ಟ್ ಪಂದ್ಯ ಸಾಗುತ್ತಿದೆ.

ಕೆವಿನ್ ಪೀಟರ್ಸನ್

ಕೆಲ ದಿಗ್ಗಜರು ಈ ಸರಣಿಗಾಗಿ ಕಾಮೆಂಟರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ಕೂಡ ಇಬ್ಬರು.

ಕಾಮೆಂಟರಿ

43 ವರ್ಷದ ಕೆವಿನ್ ಪೀಟರ್ಸನ್ ಇಂಗ್ಲೆಂಡ್‌ನ ಮಾಜಿ ಬ್ಯಾಟರ್ ಆಗಿದ್ದಾರೆ. ಅವರು ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕಾಮೆಂಟರಿಯಲ್ಲಿ ಸಮಯ ಕಳೆಯುತ್ತಿದ್ದಾರೆ.

ದುಬಾರಿ ಕಾಮೆಂಟೇಟರ್‌

ಪೀಟರ್ಸನ್ ಅತ್ಯಂತ ದುಬಾರಿ ಕಾಮೆಂಟೇಟರ್‌ಗಳಲ್ಲಿ ಒಬ್ಬರಾಗಿದ್ದಾರೆ, ಅವರು ಸರಣಿ ಅಥವಾ ಐಪಿಎಲ್'ನಲ್ಲಿ ಲಕ್ಷಗಟ್ಟಲೆ ಸಂಪಾದಿಸುತ್ತಾರೆ.

ಎಷ್ಟು ಕೋಟಿ ರೂ.

ವರದಿಯ ಪ್ರಕಾರ, ಕೆವಿನ್ ಪೀಟರ್ಸನ್ ಸೇರಿದಂತೆ ಅನೇಕ ದೊಡ್ಡ ಮಾಜಿ ಕ್ರಿಕೆಟಿಗರು ಐಪಿಎಲ್ ಸೀಸನ್‌ಗೆ ಸುಮಾರು 3 ರಿಂದ 4 ಕೋಟಿ ರೂ.  ಪಡೆಯುತ್ತಾರೆ.

ICC ಈವೆಂಟ್‌

ಐಪಿಎಲ್ ಹೊರತಾಗಿ, ಪೀಟರ್ಸನ್ ಐಸಿಸಿ ಈವೆಂಟ್‌ಗಳು, ಭಾರತ-ಇಂಗ್ಲೆಂಡ್ ಸರಣಿಗಳಲ್ಲಿ ಕಾಮೆಂಟರಿ ಮಾಡುತ್ತಾರೆ. ಇದಕ್ಕೂ ಕೋಟ್ಯಂತರ ರೂ. ಗುತ್ತಿಗೆ ಪಡೆಯುತ್ತಾರೆ.

ಇಂಡೋ-ಇಂಗ್ಲೆಂಡ್

ಸದ್ಯ ಹೈದರಾಬಾದ್'ನಲ್ಲಿ ಭಾರತ-ಇಂಗ್ಲೆಂಡ್ ಪ್ರಥಮ ಟೆಸ್ಟ್ ನಡೆಯುತ್ತಿದ್ದು ನಾಲ್ಕನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಸುದೀರ್ಘ ಸರಣಿ

ಇಂಡೋ-ಇಂಗ್ಲೆಂಡ್ ಸುದೀರ್ಘ ಸರಣಿಯಾಗಿದ್ದು, ಇಲ್ಲಿ ಉಭಯ ತಂಡಗಳು ಒಟ್ಟು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿ ಆಗುತ್ತಿದೆ.