ಟೆಸ್ಟ್'ನಲ್ಲಿ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ 3 ಭಾರತೀಯರು ಯಾರು?

28-January-2024

Author: Vinay Bhat

8848 ರನ್‌ಗಳೊಂದಿಗೆ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 29 ಶತಕ ಹಾಗೂ 30 ಅರ್ಧ ಶತಕ ಸಿಡಿಸಿದ್ದಾರೆ.

ಕೊಹ್ಲಿ ಟೆಸ್ಟ್ ರನ್

ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. 200 ಟೆಸ್ಟ್ ಪಂದ್ಯಗಳಲ್ಲಿ 15921 ರನ್‌ಗಳಿಸಿದ್ದಾರೆ.

ಸಚಿನ್ ತೆಂಡೂಲ್ಕರ್

ತೆಂಡೂಲ್ಕರ್ ಅವರ 15921 ರನ್ ಗಳಿಕೆಯಲ್ಲಿ 51 ಶತಕಗಳು ಮತ್ತು 68 ಅರ್ಧ ಶತಕಗಳು ಸೇರಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಶತಕಗಳನ್ನು ಗಳಿಸಿದ ಏಕೈಕ ಬ್ಯಾಟರ್.

ತೆಂಡೂಲ್ಕರ್

ತೆಂಡೂಲ್ಕರ್ ಕೂಡ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ಅವರ ನಾಯಕತ್ವದಲ್ಲಿ ಭಾರತ 25 ಟೆಸ್ಟ್ ಪಂದ್ಯಗಳಲ್ಲಿ 4 ರಲ್ಲಿ ಮಾತ್ರ ಗೆದ್ದಿದೆ.

ಸಚಿನ್ ತೆಂಡೂಲ್ಕರ್

ದ್ರಾವಿಡ್ ಟೆಸ್ಟ್‌ನಲ್ಲಿ ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ತಮ್ಮ ವೃತ್ತಿಜೀವನವನ್ನು ಮುಗಿಸಿದರು. 163 ಟೆಸ್ಟ್‌ಗಳಲ್ಲಿ 13265 ರನ್ ಗಳಿಸಿದ್ದಾರೆ.

ರಾಹುಲ್ ದ್ರಾವಿಡ್

ದ್ರಾವಿಡ್ ತಮ್ಮ ವೃತ್ತಿ ಜೀವನದಲ್ಲಿ 36 ಶತಕ ಮತ್ತು 63 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅವರು 52.64 ರ ಸರಾಸರಿಯೊಂದಿಗೆ ನಿವೃತ್ತರಾದರು.

ರಾಹುಲ್ ದ್ರಾವಿಡ್

ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಪರ ಮೂರನೇ ಆಟಗಾರರಾಗಿದ್ದಾರೆ. ಲಿಟಲ್ ಮಾಸ್ಟರ್ 125 ಟೆಸ್ಟ್‌ಗಳಲ್ಲಿ 10122 ರನ್‌ಗಳಿಸಿದ್ದಾರೆ.

ಸುನಿಲ್ ಗವಾಸ್ಕರ್

ಅವರ ಪೀಳಿಗೆಯ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಗವಾಸ್ಕರ್ 1971 ರಲ್ಲಿ ಪಾದಾರ್ಪಣೆ ಮಾಡಿದರು. ಅವರು 51.12 ರ ಬ್ಯಾಟಿಂಗ್ ಸರಾಸರಿಯೊಂದಿಗೆ ನಿವೃತ್ತರಾದರು.

ಸುನಿಲ್ ಗವಾಸ್ಕರ್

ಗವಾಸ್ಕರ್ ಅವರು ಟೆಸ್ಟ್ ನಾಯಕರಾಗಿ 47 ಪಂದ್ಯಗಳಿಂದ 9 ಗೆಲುವಿಗೆ ಭಾರತವನ್ನು ಮುನ್ನಡೆಸಿದರು. 1985 ರಲ್ಲಿ ಅವರ ಅಡಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡಿತು.

ಸುನಿಲ್ ಗವಾಸ್ಕರ್